DAKSHINA KANNADA
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೋ
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೋ
ಮಂಗಳೂರು, ಅಕ್ಟೋಬರ್ 12: ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೋ ಹೊಂದಿರುವ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೊರ ತಂದಿದೆ.
ಇದರ ಬಿಡುಗಡೆ ಸಮಾರಂಭ ಮಂಗಳೂರಿನಲ್ಲಿ ನಡೆಯಿತು. ಕೆ ಎಂ ಎಫ್ ಕ್ವಾಲಿಟಿ ಮಾರ್ಕ್ ನೊಂದಿಗೆ ಉತ್ನಂಪಾದಿಸಿದ ನಂದಿನಿ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ್ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಅವರು ಕೆಎಂಎಫ್ ಕ್ವಾಲಿಟಿ ಮಾರ್ಕ್ ಪಡೆಯುವ ಮೂಲಕ ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದೆ. ಹಾಲು ಉತ್ಪಾದನೆ ಮೂಲಕ ದೇಶ ಸ್ವಾವಲಂಬನೆ ಸಾಧಿಸಿದೆ. ಕೆಎಂಎಫ್ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕ್ವಾಲಿಟಿ ಮಾರ್ಕ್ ಬಗ್ಗೆ ಮಾಹಿತಿ ನೀಡಿದ ಬಿಟಿ ನಟರಾಜ್ ದೇಶದಲ್ಲಿ ಕೇವಲ 21 ಹಾಲು ಡೇರಿಗಳಿಗೆ ಮಾತ್ರ ಪ್ರತಿಷ್ಟಿತ ಈ ಕ್ವಾಲಿಟಿ ಮಾರ್ಕ್ ದೊರೆತಿದೆ. ಕರ್ನಾಟಕದಲ್ಲಿ 11 ಜಿಲ್ಲೆಗಳಿಗೆ ಮಾತ್ರ ದೊರೆತಿದ್ದು ಇದರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಾನ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಹೇಳಿದರು.
ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿ ರಾಜ ಹೆಗ್ಡೆ, ಸಹಕಾರ ಉಪನಿಬಂಧಕ ಡಿ ಕೆ ಸಲೀಂ, ಕೆಎಂಎಫ್ ನಿರ್ದೇಶಕರು ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಡಿ ವಿ ಸತ್ಯನಾರಾಯಣ್ ರಾವ್, ನಿರ್ದೇಶಕ ಸವಣೂರು ಸೀತಾರಾಮ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.