LATEST NEWS
ಭಾರಿ ಮಳೆ ನಿರ್ಮಾಣ ಹಂತದ ಮನೆಗೆ ಗುಡ್ಡ ಕುಸಿದು ಹಾನಿ

ಭಾರಿ ಮಳೆ ನಿರ್ಮಾಣ ಹಂತದ ಮನೆಗೆ ಗುಡ್ಡ ಕುಸಿದು ಹಾನಿ
ಮಂಗಳೂರು ಜೂನ್ 21:ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರ ಇಂದು ಕೂಡ ಮುಂದುವರೆದಿದ್ದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ಮಳೆ ಬರುತ್ತಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಮನೆಯೊಂದಕ್ಕೆ ಗುಡ್ಡ ಕುಸಿದು ಹಾನಿಯಾದ ಘಟನೆ ಮಂಗಳೂರಿನ ಉಳ್ಳಾಲದ ಅಂಬ್ಲಮೊಗರಿನಲ್ಲಿ ನಡೆದಿದೆ.

ಅಂಬ್ಲಮೊಗರಿನ ಮದಕ ಜಂಕ್ಷನ್ನಲ್ಲಿ ಈ ಘಟನೆ ನಡೆದಿದ್ದು, ಮನೆಯ ಒಂದು ಪಾರ್ಶ್ವದಲ್ಲಿದ್ದ ಗುಡ್ಡ ಮಳೆಯಿಂದಾಗಿ ಕುಸಿದು ಬಿದ್ದಿದೆ. ಘಟನೆ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಆಗಿಲ್ಲ.
ನಿನ್ನೆ ಸಂಜೆ ಘಟನೆ ನಡೆದಿದ್ದು ಹತ್ತಿರದ ಇನ್ನೆರಡು ಮನೆಗಳು ಅಪಾಯ ಎದುರಿಸುತ್ತಿವೆ. ಇಂದು ಬೆಳಗ್ಗಿನಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಉಳ್ಳಾಲ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ನಿನ್ನೆ ದಿನಪೂರ್ತಿ ಮಳೆಯಾಗಿತ್ತು. ಇಂದು ಮಳೆ ಕೊಂಚ ಬಿಡುವು ನೀಡಿದ್ದು ಮೋಡದ ವಾತಾವರಣ ನೆಲೆಸಿದೆ.