ನಿರಂತರವಾಗಿ ಕುಸಿಯುತ್ತಿರುವ ಗುಡ್ಡ ಮಂಗಳೂರು ಬೆಂಗಳೂರು ರೈಲು ಸಂಚಾರ ಬಂದ್

ಮಂಗಳೂರು ಅಗಸ್ಟ್ 18: ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಶಿರಾಡಿಘಾಟ್ ರಸ್ತೆಯ ಎಡಕುಮೇರಿ ಬಳಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಸುಬ್ರಹ್ಮಣ್ಯ ನೆಟ್ಟಣ‌ ರೈಲು‌ ನಿಲ್ದಾಣದಿಂದ 93 ಕಿಲೋಮೀಟರ್ ಪ್ರದೇಶದಲ್ಲಿ ಸುಮಾರು 17 ಕಡೆಗಳಲ್ಲಿ ಗುಡ್ಡ ರೈಲ್ವೆ ಹಳಿ ಮೇಲೆ ಬಿದ್ದಿದೆ.

ರೈಲ್ವೆ ಹಳಿಯಿಂದ ಮಣ್ಣು ತೆಗೆಯುವಂತಹ ಕಾಮಗಾರಿ ಭರದಿಂದ ನಡೆಯುತ್ತಿದ್ದು, 10 ಹಿಟಾಜಿ‌ ಯಂತ್ರಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಕಾಮಗಾರಿ ನಡೆಯುತ್ತಿದ್ದಂತೆ ಗುಡ್ಡಗಳು ಮತ್ತೆ ಮತ್ತೆ ರೈಲ್ವೆ ಹಳಿಗಳಿಗೆ ಬೀಳುತ್ತಿದೆ.


ನಿರಂತರ ಮಳೆಯೂ ಕಾಮಗಾರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಮುಂದಿನ 10 ದಿನಗಳ ಕಾಲವೂ ಈ ರೈಲ್ವೆ ಹಳಿ ಸಂಚಾರಕ್ಕೆ ಮುಕ್ತವಾಗುವುದು ಸಂಶಯವೇ ಆಗಿದೆ.

VIDEO

Facebook Comments

comments