Connect with us

LATEST NEWS

ಮಣಿಪಾಲದಲ್ಲಿ ಭೂಮಿಯಲ್ಲಿ ಕಾಣಿಸಿಕೊಂಡ ಬಿರಕು ಆತಂಕದಲ್ಲಿ ಸ್ಥಳೀಯರು

ಮಣಿಪಾಲದಲ್ಲಿ ಭೂಮಿಯಲ್ಲಿ ಕಾಣಿಸಿಕೊಂಡ ಬಿರಕು ಆತಂಕದಲ್ಲಿ ಸ್ಥಳೀಯರು

ಉಡುಪಿ ಜೂನ್ 19: ಮಣಿಪಾಲ ಮಂಚಿಕೆರೆ ಪ್ರದೇಶದ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸ್ಥಳಿಯರಲ್ಲಿ ಆತಂಕ ಉಂಟು ಮಾಡಿದೆ.
ಮಣಿಪಾಲದ ಮಂಚಿಕೆರೆ ನಾಗಬ್ರಹ್ಮಸ್ಥಾನ ಮುಂಭಾಗದ ಕಾಲನಿ ಸಮೀಪದ ಅಡ್ಡರಸ್ತೆಯಲ್ಲಿ ಭೂಮಿ ಬಿರುಕು ಬಿಟ್ಟಿದೆ. ಸುಮಾರು 8 ಇಂಚು ಅಗಲ 200 ಮೀ ಉದ್ದದವರೆಗೆ ಭೂಮಿ ಬಾಯಿ ಬಿಟ್ಟಿದೆ. ಅಲ್ಲದೆ ಬಿರಕು ತುಂಬಾ ಆಳವು ಇದೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶಗಳಲ್ಲಿ ಸಣ್ಣ ಮಟ್ಟದ ಬಿರುಕು ಕಾಣಿಸಿಕೊಂಡಿತ್ತು. ಮೊನ್ನೆ ಮಂಗಳವಾರು ಈ ಬಿರಕಿನ ಗಾತ್ರ ಮತ್ತಷ್ಟು ವಿಸ್ತಾರವಾಗಿ ಸ್ಥಳೀಯ ಜನರು ಆತಂಕಕ್ಕೀಡಾಗುವಂತಾಗಿದೆ.

ಸ್ಥಳೀಯ ಪ್ರದೇಶದಲ ಮನೆಯೊಂದರ ಗೋಡೆ, ಬಾವಿಯ ಕಟ್ಟೆ ಹಾಗೂ ಕಾಲನಿ ಸಂಪರ್ಕಿಸುವ ರಸ್ತೆಯಲ್ಲಿ ಕೂಡ ಬಿರುಕು ಕಾಣಿಸಿಕೊಂಡಿದೆ. ಬಿರುಕು ಸುಮಾರು 8 ಇಂಚು ಅಗಲವಿದ್ದು, ಮತ್ತಷ್ಟು ವಿಸ್ತರಿಸುವ ಆತಂಕವಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *