Connect with us

LATEST NEWS

ಬೀಡಿ ಕಾರ್ಮಿಕರ ಹೋರಾಟದ ಪ್ರಮುಖ ಹೋರಾಟಗಾರ ಸಿಪಿಎಂ ಹಿರಿಯ ಮುಖಂಡ ಬಿ. ಮಾಧವ ಇನ್ನಿಲ್ಲ

ಬೀಡಿ ಕಾರ್ಮಿಕರ ಹೋರಾಟದ ಪ್ರಮುಖ ಹೋರಾಟಗಾರ ಸಿಪಿಎಂ ಹಿರಿಯ ಮುಖಂಡ ಬಿ. ಮಾಧವ ಇನ್ನಿಲ್ಲ

ಮಂಗಳೂರು ಜೂನ್ 19: ಸಿಪಿಎಂ ಪಕ್ಷದ ಹಿರಿಯ ಮುಖಂಡ ಬಿ. ಮಾಧವ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಡಪಕ್ಷದ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಹಿರಿಯ ಮುಖಂಡ ಬಿ. ಮಾಧವ ಅವರು, ಬೀಡಿ ಕಾರ್ಮಿಕರ ಹೋರಾಟದಲ್ಲಿ ಪ್ರಮುಖ ಮುಖಂಡರಾಗಿದ್ದ ಮಾಧವ ಅವರ ಅಗಲಿಕೆ ಜಿಲ್ಲೆಯ ಕಾರ್ಮಿಕ ಹೋರಾಟಕ್ಕೆ ಸಣ್ಣ ಹಿನ್ನಡೆ ಎಂದು ಹೇಳಬಹುದಾಗಿದೆ.

ಸಿ.ಪಿ.ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ , ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಸಿ.ಪಿ.ಎಂ ಕಾರ್ಯದರ್ಶಿ ಯಾಗಿ, ದ.ಕ.ಜಿಲ್ಲಾ ಸಿಐಟಿಯು ಅಧ್ಯಕ್ಷರಾಗಿ, ಬೀಡಿ ಪೆಡರೇಶನ್ ರಾಷ್ಟ್ರೀಯ ಅಧ್ಯಕ್ಷರಾಗಿ, ವಿಮಾ ನೌಕರರ ಸಂಘದ ಅಧ್ಯಕ್ಷರಾಗಿ ಬಿ.ಮಾಧವ ಅವರು ಕಾರ್ಯನಿರ್ಹಿಸಿದ್ದರು.

ಸುದೀರ್ಘ ಕಾಲ ಕಾರ್ಮಿಕ ಚಳವಳಿ, ಎಡ ಪಕ್ಷಗಳ ಚಳವಳಿಯ ನೇತೃತ್ವ ವಹಿಸಿದ್ದ ಬಿ.ಮಾಧವ ಅವರ ಅಗಲಿಕೆಯು ಕಾರ್ಮಿಕ ವರ್ಗದ ಹೋರಾಟಕ್ಕೆ ಬಹುದೊಡ್ಡ ನಷ್ಟವಾಗಿದೆ.