Connect with us

  LATEST NEWS

  ಬಿಜೆಪಿ ಅವಧಿಯ 11.50 ಕೋಟಿ ಅನುದಾನದ ಕಾಮಗಾರಿಗಳಿಗೆ ಕಾಂಗ್ರೆಸ್ ಶಂಕುಸ್ಥಾಪನೆ, ಶಾಸಕ ವೇದವ್ಯಾಸ್ ಕಾಮತ್ .!

  ಮಂಗಳೂರು :  ಮಂಗಳೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂರು ಮಹಡಿಯ ಸುಸಜ್ಜಿತ ವಿವಿಐಪಿ ಗೆಸ್ಟ್ ಹೌಸ್ ಹಾಗೂ 6.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮವು ಮಾನ್ಯ ಸ್ಪೀಕರ್  ಯು.ಟಿ ಖಾದರ್ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಘನ ಉಪಸ್ಥಿತಿಯಲ್ಲಿ ನಡೆದಿದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳಿಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

   

  ಲೋಕೋಪಯೋಗಿ ಇಲಾಖೆಯಿಂದ ವಿವಿಐಪಿ ಗೆಸ್ಟ್ ಹೌಸ್ ಯೋಜನೆಗೆ ಕಳೆದ ವರ್ಷದ ಮಾರ್ಚ್ ನಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಆದೇಶ ಸಂಖ್ಯೆ ಸಿ.ಇ.ಆರ್ 336/2022-23 ದಿನಾಂಕ 21-03-2023 ರನ್ವಯ ತಾಂತ್ರಿಕ ಮಂಜೂರಾತಿ ನೀಡಿ 5 ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಾಗೂ ಸರ್ಕಾರ ಬದಲಾದ ಕಾರಣ ಕಾಮಗಾರಿಯ ಆರಂಭಕ್ಕೆ ವಿಳಂಬವಾಗಿತ್ತು. ಈಗ ಆ ಯೋಜನೆಯ ತಾಂತ್ರಿಕ ಬಿಡ್, ಗುತ್ತಿಗೆದಾರರ ಕರಾರು (ಸಂಖ್ಯೆ ಡಿ.ಎ.ಆರ್ 266/2023-24 ದಿನಾಂಕ 07-12-2023) ಇತ್ಯಾದಿಗಳು ಪ್ರಸ್ತುತ ಸರ್ಕಾರದಲ್ಲಿ ಶಂಕುಸ್ಥಾಪನೆ ನಡೆದಿದೆ.

  ಅದೇ ರೀತಿಯಲ್ಲಿ ಕದ್ರಿಪದವು ಹೈಸ್ಕೂಲ್ ಹತ್ತಿರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ 6.50 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು ಸದರಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮವೂ ನಡೆದಿದ್ದು ಅತೀ ಶೀಘ್ರದಲ್ಲಿ ಕಾಮಗಾರಿಗಳೆಲ್ಲವೂ ಮುಗಿದು ಲೋಕಾರ್ಪಣೆಗೊಳ್ಳಲಿ ಎಂದು ಶಾಸಕರು ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply