ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರದ ನಯನತಾರಾ 2023ರ ಆಗಸ್ಟ್​ 31ಕ್ಕೆ ಇನ್​ಸ್ಟಾಗ್ರಾಮ್​ಗೆ ಎಂಟ್ರಿ ಕೊಟ್ಟರು. ಅಂದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ವಿಡಿಯೋ ಮೂಲಕ ರಿವೀಲ್​​ ಮಾಡಿದ್ರು. ಈ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ನಲ್ಲಿ 8.9 ಮಿಲಿಯನ್​ ಫಾಲೋವರ್ಸ್​ ಸಂಪಾದಿಸಿರುವ ಅವರು ಈವರೆಗೆ 119 ಪೋಸ್ಟ್​​ಗಳನ್ನು ಶೇರ್ ಮಾಡಿದ್ದಾರೆ.

ನಯನತಾರಾ ಕೊನೆಯದಾಗಿ ‘ಅನ್ನಪೂರ್ಣಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ‘ಮನ್ನಂಗಟ್ಟಿ: ಸಿನ್ಸ್​ 1960’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ಟಾಕ್ಸಿಕ್​​​​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಟಾಕ್ಸಿಕ್ ಅಖಾಡಕ್ಕೆ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಯನತಾರಾ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.