LATEST NEWS
ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಮರು ನಾಮಕಾರಣ ಮಾಡಿದ ಭಜರಂಗದಳ

ಮಂಗಳೂರು: ನಾರಾಯಣ ಗುರುಗಳ ಸ್ತಬ್ದಚಿತ್ರ ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ದ ಕರಾವಳಿಯಲ್ಲಿ ನಡೆದ ಸ್ವಾಭಿಮಾನಿ ನಡಿಗೆ ನಡುವೆ ಇದೀಗ ನಗರದ ಲೇಡಿಹಿಲ್ ವೃತ್ತಕ್ಕೆ ಬಜರಂಗದಳ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಮರು ನಾಮಕರಣ ಮಾಡಿದೆ.
ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಬೇಕು ಈ ಹಿಂದೆ ಹಲವು ಸಂಘಟನೆಗಳು ಒತ್ತಾಯ ಮಾಡಿತ್ತು,. ಮತ್ತು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಇತ್ತೀಚಿಗೆ ಶೀಘ್ರ ನಾಮಕರಣ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಪಾಲಿಕೆ ಅಧಿಕೃತವಾಗಿ ನಾಮಕರಣ ಮಾಡುವ ಮೊದಲೇ ಬಜರಂಗದಳ ನಾಮಫಲಕ ಅಳವಡಿಸಿದೆ.
