ಗೋಲ್ಟನ್ ಗೇಟ್ ಬಾರಿಗೆ ಪೊಲೀಸ್ ದಾಳಿ : 8 ಮಂದಿ ಮಹಿಳೆಯರ ರಕ್ಷಣೆ

ಮಂಗಳೂರು, ಮಾರ್ಚ್ 25: ಮಂಗಳೂರಿನ ಎಂ. ಜಿ. ರಸ್ತೆಯ ಸಾಯಿಬಿನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟಿಗೆ ಪೊಳೀಸರು ದಾಳಿ ನಡೆಸಿದ್ದಾರೆ.

ಈ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಮಹಿಳೆಯರಿಂದ ಅಶ್ಲೀಲ ಡ್ಯಾನ್ಸ್ ಮಾಡಲಾಗುತ್ತಿದ್ದು ಎಂದು ಆರೋಪಿಸಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೊಳಿಸರು ಇಂದು ರಾತ್ರಿ ದಾಳಿ ನಡೆಸಿದ್ದಾರೆ. ಈ ಸಂಬಂಧ ಬಾರಿನ ಮೆನೆಜರ್ ಸಹಿತ 5 ಮಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಬಾರಿನಲ್ಲಿ ಒತ್ತಾಯ ಪೂರ್ವಕವಾಗಿ ಮತ್ತು ಕಾನೂನು ಬಾಹಿರವಾಗಿ ನೃತ್ಯಮಾಡುತ್ತಿದ್ದ 8 ಜನ ಉತ್ತರ ಭಾರತ ಮೂಲದ ಮಹಿಳೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕಳೆದ ಹಲವು ತಿಂಗಳುಗಳಿಂದ ಈ ಬಾರ್‌ ನಲ್ಲಿ ಈ ಧಂದೆ ನಡೆಯುತ್ತಿದ್ದು, ಸ್ಥಳೀಯ ಪೊಲೀಸರಿಗೆ ಹಫ್ತಾ ನೀಡಿ ನಡೆಸಲಾಗುತ್ತಿತ್ತು ಎಂದು ಸ್ಥಳಿಯರು ಆರೋಪಿಸಿದ್ದಾರೆ. ಆದರೆ ಇತ್ತಿಚೆಗೆ ಅಧಿಕಾರ ಸ್ವೀಕರಿಸಿದ್ದ ನೂತನ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರು ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಲ್ಲ ಎಂದು ಖಡಕ್ಕಾಗಿ ಹೇಳಿದ್ದು, ಸಾರ್ವಜನಿಕರ ದೂರಿನ ಆಧಾರದಲ್ಲಿ ಅವರ ನೇರಾ ನಿರ್ದೇಶನದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.