LATEST NEWS
ರಾಜಕೋಟ್ ನ ಗೇಮಿಂಗ್ ಝೋನ್ ನಲ್ಲಿ ಬೆಂಕಿ ಅವಘಡ – 12ಮಕ್ಕಳು ಸೇರಿ 24ಕ್ಕೂ ಅಧಿಕ ಮಂದಿ ಸಾವು
ರಾಜಕೋಟ್ ಮೇ 25: ಗುಜರಾತ್ ನ ರಾಜ್ ಕೋಟ್ ನಗರಗದಲ್ಲಿ ಗೇಮಿಂಗ್ ಝೋನ್ ನಲ್ಲಿ ಬೆಂಕಿ ಅವಘಡ ಸಂಭವಿಸಿ 12 ಮಕ್ಕಳು ಸೇರಿ 24ಕ್ಕೂ ಅಧಿಕ ಮಂದಿ ಸಾವನಪ್ಪಿರುವ ಘಟನೆ ನಡೆದಿದೆ.
ಟಿಆರ್ಪಿ ಗೇಮಿಂಗ್ ಝೋನ್ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಇದುವರೆಗೆ 20 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ರಾಜ್ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಒಳಗೆ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ಟಿಆರ್ಪಿ ಗೇಮ್ ಝೋನ್ನಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೇಸಿಗೆ ರಜೆಯ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿದ್ದ ಮಕ್ಕಳು ಬಲಿಯಾಗಿದ್ದಾರೆ.
You must be logged in to post a comment Login