LATEST NEWS
ಕುವೈತ್ ನಲ್ಲಿ ಬೆಂಕಿ ಅವಘಢ – ಕೇರಳದ 13 ಮಂದಿ ಸಾವು
ತಿರುವನಂತಪುರ ಜೂನ್ 13: ಕುವೈತ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೇರಳದ 13ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಈ ಅಗ್ನಿ ದುರಂತದಲ್ಲಿ 50ಕ್ಕೂ ಅಧಿಕ ಮಂದಿ ಸಾವನಪ್ಪಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿರುವ ಕಾರಣ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 195 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.
ಕೊಟ್ಟಾಯಂನ ಚಂಗನಾಶ್ಶೇರಿಯ ಶ್ರೀಹರಿ ಪಿ (27), ಮಲಪ್ಪುರಂನ ಬಾಹುಲೇಯನ್ (36), ಕೊಲ್ಲಂನ ಶಮೀರ್ ಉಮರುದ್ದೀನ್ (30), ಕಾಸರಗೋಡಿನ ಚೆಂಗಳದ ಕೆ. ರೆಂಜಿತ್ (34), ಕಾಸನರಗೋಡಿನ ಪಿಲಿಕೋಡು ನಿವಾಸಿ ಕೇಲು(58), ಕೊಟ್ಟಾಯಂನ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟದ ಪಂದಳಂನ ಆಕಾಶ್ ಶಶಿಧರನ್ (31), ಕೊಲ್ಲಂನ ಪುನಲೂರಿನ ನಿವಾಸಿ ಸಾಜನ್ ಜಾರ್ಜ್ (29), ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್ (56) ಮತ್ತು ಪಿ.ವಿ.ಮುರಳೀಧರನ್ (68), ಪತ್ತನಂತಿಟ್ಟದ ಲೂಕೋಸ್ (48), ಕೊಲ್ಲಂನ ತಿರುವಲ್ಲಾದ ಥಾಮಸ್ ಉಮ್ಮನ್ (37), ಮಲಪ್ಪುರಂನ ನೂಹು ಮೃತಪಟ್ಟವರು ಎಂದು ತಿಳಿದುಬಂದಿದೆ. ಹಲವು ಮೃತದೇಹಗಳನ್ನು ಇನ್ನೂ ಗುರುತಿಸಬೇಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕೇರಳ ಸರ್ಕಾರದ ಅನಿವಾಸಿ ಕೇರಳಿಯರ(ಎನ್‌ಆರ್‌ಕೆಎಸ್) ಕಲ್ಯಾಣ ಸಂಸ್ಥೆ ತಿಳಿಸಿದೆ.