LATEST NEWS
ನೂಪುರ್ ಶರ್ಮಾ ವಿರುದ್ದ ಪ್ರತಿಭಟನೆ – ವಿದೇಶಿಗರಿಗೆ ಕುವೈಟ್ ನಿಂದ ಗೇಟ್ ಪಾಸ್
ಕುವೈಟ್ ಜೂನ್ 13: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ವಿರುದ್ದ ನೀಡಿದ್ದ ಹೇಳಿಕೆ ಖಂಡಿಸಿ ಕುವೈಟ್ ನಲ್ಲಿ ವಿದೇಶಿಗರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದೀಗ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನಿವಾಸಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಕುವೈಟ್ ಸರಕಾರ ಆದೇಶಿಸಿದೆ.
ಶುಕ್ರವಾರ ಫಹಾಹೀಲ್ ಎಂಬಲ್ಲಿ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ಭಾರತೀಯರು ಸೇರಿದಂತೆ ಕುವೈಟ್ ನಲ್ಲಿ ಕೆಲಸಕ್ಕೆ ಆಗಮಿಸಿದ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು. ಆದರೆ ಕುವೈತ್‌ನಲ್ಲಿ ವಲಸಿಗರಿಂದ ಧರಣಿ ಅಥವಾ ಪ್ರತಿಭಟನೆಗಳನ್ನು ಆಯೋಜಿಸಬಾರದು ಕಾನೂನು ಮತ್ತು ನಿಬಂಧನೆಗಳು ಇದೆ. ಹೀಗಾಗಿ ಕಾನೂನಿ ಉಲ್ಲಂಘಿಸಿದ ಕಾರಣ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಪ್ರತಿಭಟನೆಯ ಭಾಗವಾಗಿರುವ ಅನಿವಾಸಿಗಳು ಮುಂದೆ ದೇಶಕ್ಕೆ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ವರದಿಯಾಗಿದೆ.
ಕುವೈತ್‌ನಲ್ಲಿರುವ ಎಲ್ಲಾ ವಲಸಿಗರು ಕುವೈತ್ ಕಾನೂನುಗಳನ್ನು ಗೌರವಿಸಬೇಕು ಮತ್ತು ಯಾವುದೇ ರೀತಿಯ ಪ್ರದರ್ಶನಗಳಲ್ಲಿ ಭಾಗವಹಿಸಬಾರದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ
You must be logged in to post a comment Login