UDUPI
ಕುಂದಾಪುರ ಕಾಲೇಜು ವಿಧ್ಯಾರ್ಥಿ ಚೂರಿ ಇರಿತ ಪ್ರಕರಣ ಪರಾರಿಯಾದ ಬಾಲಕನ ವಶ
ಕುಂದಾಪುರ ಕಾಲೇಜು ವಿಧ್ಯಾರ್ಥಿ ಚೂರಿ ಇರಿತ ಪ್ರಕರಣ ಪರಾರಿಯಾದ ಬಾಲಕನ ವಶ
ಉಡುಪಿ ಡಿಸೆಂಬರ್ 18: ಕುಂದಾಪುರ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಬಾಲಕನನ್ನು ಬಂಧಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಕುಂದಾಪುರ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿ ಅನುಪ್ ಎನ್ನುವ ಬಾಲಕನಿಗೆ ಪ್ರೇಯಸಿಯ ವಿಚಾರವಾಗಿ ಅದೆ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ನಾಲ್ವರು ಸೇರಿ ಸ್ಕೇಚ್ ಹಾಕಿ ಕಾಲೇಜಿನ ಆವರಣದಲ್ಲಿ ಚೂರಿ ಇರಿದಿದ್ದರು.
ಘಟನೆಯ ಬಳಿಕ ಪೊಲೀಸ್‌ರು ಚೂರಿ ಇರಿತ ಬಾಲಕನ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿರುವುದು ತಿಳಿದು ತನ್ನ ಸಂಬಂಧಿಗಳ ಮನೆ ಸೇರಿದ್ದ.
ಚೂರಿ ಇರಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣವನ್ನು ಭೇದಿಸಲು ವಿವಿಧ ತಂಡ ರಚಿಸಿದ್ದರು. ಬಾಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತುಗಲ್ ದೋಣಿ ಎಂಬಲ್ಲಿ ತನ್ನ ಸಂಬಂಧಿಯ ಮನೆಯಲ್ಲಿರುವುದು ಖಚಿತವಾಗುತ್ತಿದ್ದಂತೆಯೇ ಅಲ್ಲಿಗೆ ತೆರಳಿದ ಪೊಲೀಸರ ತಂಡ ಆತನನ್ನು ಕರೆತಂದಿದೆ.ನಂತರ ಬಾಲಕನನ್ನು ಉಡುಪಿಯಲ್ಲಿನ ಬಾಲನ್ಯಾಯ ಮಂಡಳಿಯೆದುರು ಹಾಜರುಪಡಿಸಲಾಗಿದೆ.
You must be logged in to post a comment Login