Connect with us

LATEST NEWS

ಕುಂದಾಪುರ ಕೊಡೇರಿ ದೋಣಿ ದುರಂತ ಇನ್ನೂ ಪತ್ತೆಯಾಗದ ನಾಲ್ವರು ಮೀನುಗಾರರು

ಕುಂದಾಪುರ ಅಗಸ್ಟ್ 16: ಉಡುಪಿಯ ಕುಂದಾಪುರದ ಕೊಡೇರಿ ಎಂಬಲ್ಲಿ ಮೀನುಗಾರಿಕಾ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ನಡೆದಿದ್ದು, ದೋಣಿಯಲ್ಲಿದ್ದ 12 ಜನರ ಪೈಕಿ ನಾಲ್ವರು ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ.


ಇಂದು ಮುಂಜಾನೆ ಸಾಗರ ಶ್ರೀ ಎಂಬ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ 12 ಜನ ಕಡಲಿನ ಅಬ್ಬರಕ್ಕೆ ದೋಣಿಯಿಂದ ಮುಗುಚಿ ಬಿದ್ದಿದ್ದಾರೆ. ಈ ಪೈಕಿ ಎಂಟು ಜನರು ಸಾವಿನ ಜೊತೆ ಕಾದಾಡಿ ಈಜಿ ದಡ ಸೇರಿದ್ದಾರೆ. ಆದರೆ ನಾಲ್ವರು ಮೀನುಗಾರರು ಕಡಲಿನಲ್ಲಿ ಕಳೆದು ಹೋದವರು ಇನ್ನೂ ಪತ್ತೆಯಾಗಿಲ್ಲ. ಮೀನುಗಾರಿಕೆಯನ್ನು ಮುಗಿಸಿ ಕಡಲಿನಿಂದ ಇನ್ನೇನೋ ಮೇಲೆ ಬರಬೇಕು ಅನ್ನುವಷ್ಟರಲ್ಲೇ 20 ಅಡಿ ಎತ್ತರದ ಭಾರಿ ಅಲೆಯೊಂದು ದೋಣಿಗೆ ಬಡಿದಿದೆ. ಇದರಿಂದ ನಿಯಂತ್ರಣ ತಪ್ಪಿದ ದೋಣಿ ಅಲ್ಲೇ ಇದ್ದ ಬಂಡೆ ಕಲ್ಲಿಗೆ ಬಡಿದು ಮಗುಚಿಬಿದ್ದಿದೆ.

ಬೈಂದೂರಿನ ಕೊಡೆರಿ ಪರಿಸರದಲ್ಲಿ ಇಂಥ ದುರ್ಘಟನೆ ಇದೇ ಮೊದಲಲ್ಲ ಈ ಹಿಂದೆಯೂ ಇಂಥ ನಾಲ್ಕೈದು ದೋಣಿಗಳು ಇಲ್ಲಿ ಅಪಘಾತಕ್ಕೀಡಾಗಿದ್ದವು. ಆದರೆ ಈ ಬಾರಿ ನಡೆದ ದುರಂತ ಮಾತ್ರ ನಾಲ್ವರ ಪ್ರಾಣವನ್ನೇ ಕಸಿದುಕೊಂಡಿದೆ.
ದುರಂತಕ್ಕೀಡಾದ ಸಾಗರ ಶ್ರೀ ಎಂಬ ದೋಣಿಯಲ್ಲಿದ್ದ ಲಕ್ಷ್ಮಣ ಕಾರ್ವಿ ನಾಗ ಖಾರ್ವಿ ಮಂಜುನಾಥ ಖಾರ್ವಿ ಶೇಖರ ಖಾರ್ವಿ ಎಂಬ ನಾಲ್ವರು ಇನ್ನೂ ಕಣ್ಮರೆಯಾಗಿದ್ದು ಇವರಿಗಾಗಿ ತೀವ್ರ ಹುಡುಕಾಟ ನಡೆದಿದೆ.

ಸ್ಥಳೀಯ ಮೀನುಗಾರರ ಜೊತೆಗೆ ಕರಾವಳಿ ಕಾವಲು ಪಡೆ ಮತ್ತಿತರ ರಕ್ಷಣಾ ಕಾರ್ಯಕರ್ತರು ಕಡಲಿ ಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಕಡಲಿನ ಪ್ರಕ್ಷುಬ್ಧ ವಾತಾವರಣ ಮತ್ತು ವಿಪರೀತ ಮಳೆ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಮೀನುಗಾರರಿಗೆ ಧೈರ್ಯ ತುಂಬಿದ್ದಾರೆ. ಈ ನಾಲ್ವರಲ್ಲಿ ಇಬ್ಬರು ಬಲೆಗೆ ಸಿಲುಕಿದ ಕಾರಣ ಈಜಲಾಗದೆ ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ. ಇವರಿಬ್ಬರ ದೇಹ ಬಲೆಯಲ್ಲೇ ಇದೆ ಎನ್ನಲಾಗುತ್ತಿದ್ದು ಬಲೆಯನ್ನು ಮೇಲೆ ಎಳೆಯಲು ಹರಸಾಹಸಪಡುತ್ತಿದ್ದಾರೆ ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *