Connect with us

LATEST NEWS

ಶಿವರಾತ್ರಿ ಪೂಜೆ ವಿಚಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತೊಂದು ವಿವಾದ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ಅರ್ಚಕರು ಮತ್ತು ಕುಕ್ಕೆ ಹಿತರಕ್ಷಣಾ ವೇದಿಕೆ ಮಧ್ಯೆ ಶಿವರಾತ್ರಿ ಆಚರಣೆ ವಿಚಾರ ಹೊಸ ವಿವಾದ ಹುಟ್ಟು ಹಾಕಿದ್ದು. ಅರ್ಚಕರ ಪರವಾಗಿ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಶಿವರಾತ್ರಿ ಆಚರಣೆ, ಸಂಪ್ರದಾಯ, ಪೂಜಾ ಪದ್ಧತಿಯಲ್ಲಿ ಬದಲಾವಣೆ ಸಲ್ಲದು ಎಂದು ಮನವಿ ಸಲ್ಲಿಸಿದೆ.


ಕುಕ್ಕೆಯಲ್ಲಿ ತಂತ್ರಸಾರ ಆಗಮದಂತೆ ಮತ್ತು ವೈಖಾಸನ ಪದ್ಧತಿಯಂತೆ ಪೂಜೆ ನಡೆಸಲಾಗುತ್ತಿದೆ. ಆದ್ರೆ ಈ ಬಾರಿಯ ಶಿವರಾತ್ರಿಯನ್ನು ಶೈವ ಆಗಮ ಪದ್ಧತಿಯಲ್ಲಿ ನಡೆಸಬೇಕೆಂದು ಕುಕ್ಕೆ ಕ್ಷೇತ್ರ ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಪತ್ರ ಸಲ್ಲಿಸಿದೆ. ಮಾಧ್ವ ಸಂಪ್ರದಾಯದ ಅರ್ಚಕರು ಶಿವ ಕ್ಷೇತ್ರದಲ್ಲಿ ಶೈವ ಪದ್ಧತಿಯಂತೆ ಶಿವರಾತ್ರಿ ನಡೆಸಬೇಕು ಎಂಬುದು ಹಿತರಕ್ಷಣಾ ಸಮಿತಿ ಆಗ್ರಹ. ಇದೇ ಬೇಡಿಕೆ ಇತರ ದೇವಸ್ಥಾನಗಳಲ್ಲೂ ಆರಂಭವಾದ್ರೆ ಸಂಪ್ರದಾಯಕ್ಕೆ ಮತ್ತು ಸಮಾಜದಲ್ಲಿ ಹೊಸ ಸಂಘರ್ಷಕ್ಕೆ ದಾರಿಯಾಗುತ್ತದೆ ಅನ್ನೊದು ಸಂಪ್ರದಾಯ ಸಂರಕ್ಷಣಾ ಸಮಿತಿ ವಾದವಾಗಿದೆ


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಹಳ ವರ್ಷಗಳಿಂದ ಆಡಳಿತ ಮಂಡಳಿ ನರಸಿಂಹ ಮಠ ಮತ್ತು ಅರ್ಚಕರ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇತ್ತು. ಅದೆಷ್ಟೋ ಬಾರಿ ದೂರು ದಾಖಲಾಗಿದೆ. ಮಠ ದೇವಸ್ಥಾನ ನಮಗೆ ಸಂಬಂಧಪಟ್ಟದ್ದು ಎಂದು ವಾದವಾದ್ರೆ ದೇವಸ್ಥಾನಕ್ಕೂ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಅಂತ ಆಡಳಿತ ಮಂಡಳಿ ವಾದ. ಕೊನೆಗೂ ಮಠ ಮತ್ತು ದೇವಸ್ಥಾನದ ಮಧ್ಯೆ ವಿವಾದ ನ್ಯಾಯಾಲಯದಲ್ಲಿ ತೀರ್ಮಾನಗೊಂಡಿತು. ಆ ಪ್ರಕಾರ ದೇವಸ್ಥಾನದಲ್ಲಿ ನಡೆಯುವ ಸೇವೆ ಅಲ್ಲೇ ನಡೆಯಲು ಆದೇಶ ನೀಡಲಾಯಿತು. ಆದರೆ ಒಳಜಗಳ ತಾರಕಕ್ಕೇರಿ ಕುಕ್ಕೆ ಕ್ಷೇತ್ರ ಹಿತರಕ್ಷಣಾ ಸಮಿತಿ ಆರಂಭವಾಯ್ತು. ಆ ಬಳಿಕ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದು ಶೈವ ಕ್ಷೇತ್ರದಲ್ಲಿ ಅದರ ಆಗಮ ಪ್ರಕಾರ ಪೂಜಾದಿಗಳು ನಡೆಯಬೇಕು ಎಂಬ ಆಗ್ರಹವನ್ನು ಹಿತರಕ್ಷಣಾ ಸಮಿತಿ ಪ್ರತಿಪಾದಿಸುತ್ತಿದೆ.

ಇನ್ನು ಶಿವರಾತ್ರಿಗೆ ಕೆಲವೇ ದಿನಗಳಿರುವಾಗ ಹೊಸ ವಿವಾದ ಕುಕ್ಕೆಯಲ್ಲಿ ಹೊಗೆಯಾಡುತ್ತಿದೆ. ಚೆಂಡು ಮುಜರಾಯಿ ಸಚಿವರ ಅಂಗಳದಲ್ಲಿದೆ. ಧಾರ್ಮಿಕ ಪರಿಷತ್ ಮಧ್ಯೆ ಪ್ರವೇಶಿಸಿದರೆ ಯಾವುದಾದರೂ ನಿರ್ಧಾರ ಸಾಧ್ಯ ಎಂಬುದು ಭಕ್ತರ ಅಭಿಪ್ರಾಯ

Share Information
Continue Reading
Advertisement
Click to comment

Leave a Reply

Your email address will not be published. Required fields are marked *