LATEST NEWS
ಚಂದ್ರಗ್ರಹಣ ಇದ್ದರೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು….!!
ಪುತ್ತೂರು ಅಕ್ಟೋಬರ್ 28: ಇಂದು ಖಗ್ರಾಸ ಚಂದ್ರಗ್ರಹಣ ಇದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಕರಾವಳಿಯ ಕೆಲವು ದೇವಸ್ಥಾಗಳಲ್ಲಿ ಸಂಜೆಯ ನಂತರ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಆದರೂ ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ದಂಡೆ ಇದೆ. ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ರಾತ್ರಿ ಪೂಜೆಯ ಸಮಯ ಬದಲಾವಣೆ ಮಾಡಲಾಗಿದೆ. ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ರಾತ್ರಿಯ ಪೂಜೆ ಸಂಜೆ 6.30 ಕ್ಕೆ ಮುಕ್ತಾಯವಾಗಲಿದ್ದು, 6.30 ರ ಬಳಿಕ ದೇವಸ್ಥಾನದ ಒಳಗೆ ಭಕ್ತರಿಗಿಲ್ಲ ಪ್ರವೇಶಕ್ಕೆ ಅವಕಾಶ ಇಲ್ಲ.
ಆದರೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಸಾವಿರಾರು ಭಕ್ತರು ಆಗಮಿಸಿದ್ದು, ಸಂಜೆಯ ಒಳಗೆ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಚಂದ್ರ ಗ್ರಹಣ ಹಿನ್ನಲೆ ಸಂಜೆಯ ಆಶ್ಲೇಷ ಪೂಜೆ ಮತ್ತು ಅನ್ನದಾನವೂ ರದ್ದಾಗಿದೆ.
You must be logged in to post a comment Login