Connect with us

DAKSHINA KANNADA

ಮತ್ತೆ ನಿಷೇಧದ ಬ್ಯಾನರ್ – ಕುಕ್ಕೆ ಸುಬ್ರಹ್ಮಣ್ಯ ವಾರ್ಷಿಕ ಮಹೋತ್ಸವದ ವೇಳೆ ಅನ್ಯಮತೀಯ ವ್ಯಾಪಾರಿಗಳಿಗೆ ನಿರ್ಭಂದ

ಪುತ್ತೂರು ನವೆಂಬರ್ 23: ಮತ್ತೆ ಕರಾವಳಿಯಲ್ಲಿ ಧರ್ಮದಂಗಲ್ ಪ್ರಾರಂಭವಾಗಿದ್ದು, ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಸಂದರ್ಭ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಿರುವ ಬ್ಯಾನರ್ ಅಳವಡಿಸಲಾಗಿದೆ.


ಕುಮಾರಧಾರ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ಬ್ಯಾನರ್ ಹಾಕಲಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಬಳಿಕ ಮತ್ತೆ ವ್ಯಾಪಾರ ನಿಶೇಧ ಪ್ರಾರಂಭಗೊಂಡಿದೆ. ಹದಿನೈದು ದಿನಗಳ ಕಾಲ ನಡೆಯುವ ಷಷ್ಠಿ ಮಹೋತ್ಸವ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿಲಿದ್ದಾರೆ. ಇದೀಗ ಈ ಬ್ಯಾನರ್ ಮತ್ತೆ ವಿವಾದಕ್ಕೆ ಕಾರಣವಾಗುವಂತಿದೆ.

Advertisement
Click to comment

You must be logged in to post a comment Login

Leave a Reply