KARNATAKA
ಉಡುಪಿ ಮಣಿಪಾಲದ ಕ್ಲಬ್, ಪಬ್ ಗಳ ವಿರುದ್ದ ಕ್ರಮಕ್ಕೆ ಕುಯಿಲಾಡಿ ಸುರೇಶ್ ನಾಯಕ್ ಒತ್ತಾಯ..!
ಉಡುಪಿ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಗಿ ಇಲ್ಲದೆ ಪಬ್ , ಕ್ಲಬ್ ಗಳು ಬೇಕಾಬಿಟ್ಟಿಯಾಗಿ ತೆರೆದಿಟ್ಟುಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ದಂಧೆ ನಿಲ್ಲಿಸಲು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾ ಎಸ್ಪಿಯನ್ನು ಒತ್ತಾಯಿಸಿದ್ದಾರೆ.
ಉಡುಪಿ : ಉಡುಪಿ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಗಿ ಇಲ್ಲದೆ ಪಬ್ , ಕ್ಲಬ್ ಗಳು ಬೇಕಾಬಿಟ್ಟಿಯಾಗಿ ತೆರೆದಿಟ್ಟುಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ದಂಧೆ ನಿಲ್ಲಿಸಲು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾ ಎಸ್ಪಿಯನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್‌ನ ಹೆಸರಿನಲ್ಲಿ ಇಸ್ಪಿಟ್ ಕ್ಲಬ್‌ಗಳು ದಿನದ 24 ಗಂಟೆಯೂ ತೆರೆದಿರುವುದು ಗಮನಕ್ಕೆ ಬಂದಿರುತ್ತದೆ.
ಇದರಿಂದ ಸಮಾಜ ಹಾದಿ ತಪ್ಪುತಿದೆ. ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಲೈಸೆನ್ಸ್ ಬಳಸಿಕೊಂಡು ಪಬ್‌ಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ನಡೆಸುತ್ತಿವೆ.
ಈ ಚಟುವಟಿಕೆಗಳು ಕಾನೂನು ಬಾಹಿರವಾಗಿರುತ್ತವೆ.
ಸಮಯ ಮೀರಿ ಕೆಲವೊಂದು ಬಾರ್ ಮತ್ತು ರೆಸ್ಟೋರೆಂಟ್‌ಗಳು ಅಂಜಿಕೆಯಿಲ್ಲದೆ ವ್ಯಾಪಾರ ನಡೆಸುತ್ತಿದ್ದು.ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ.
ಮಣಿಪಾಲದ ಡಿಸಿ ಕಚೇರಿ ರಸ್ತೆಯಲ್ಲಿರುವ ಕೆಲವು ರೆಸ್ಟೋರೆಂಟ್‌ಗಳು ಮುಂಜಾನೆ 3 ಗಂಟೆಯವರೆಗೂ ತೆರೆದಿರುತ್ತವೆ.
ಮಣಿಪಾಲದ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್‌ಗಳು ಡ್ರಗ್ಸ್ ಸೇವನೆಯ ಅಡ್ಡೆಯಾಗುತ್ತಿವೆ.
ಎಜ್ಯುಕೇಶನ್ ಹಬ್ಬಾಗಿದ್ದ ಮಣಿಪಾಲ ಡ್ರಗ್ಸ್ ಕೇಂದ್ರವಾಗಿ ಬೆಳೆಯುತ್ತಿದ್ದು ಸ್ಥಳೀಯ ವಿದ್ಯಾರ್ಥಿಗಳು, ಸ್ಥಳೀಯ ಯುವಜನತೆ ಮತ್ತು ಹೊರ ಊರಿನಿಂದ ಮತ್ತು ಹೊರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಯುವಜನತೆಯ ಡ್ರಗ್ಸ್ ದಾಸರಾಗುತ್ತಿದ್ದಾರೆ ಎಂದು ಭೀತಿ ವ್ಯಕ್ತಪಡಿಸಿದ ಕುಯಿಲಾಡಿ ಈ ಅನೈತಿಕ ದಂಧೆಗಳನ್ನು ನಿರ್ದಕ್ಷಿಣ್ಯವಾಗಿ ಮಟ್ಟಹಾಕಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಒತ್ತಾಯ ಮಾಡಿದ್ದಾರೆ.