Connect with us

    LATEST NEWS

    Heath Streak: ನಾನು ಇನ್ನು ಜೀವಂತವಾಗಿದ್ದೇನೆ ಎಂದ ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್

    ಜಿಂಬಾಬ್ವೆ ಅಗಸ್ಟ್ 23: ಖ್ಯಾತ ಕ್ರಿಕೆಟಿಗ ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್ ಸಾವಿನ ಸುದ್ದಿ ಸುಳ್ಳು ಎಂದು ತಿಳಿದು ಬಂದಿದ್ದು, ಇದೀಗ ಸ್ವತಃ ಸ್ಟ್ರೀಕ್ ಅವರೇ ಮಾಹಿತಿ ನೀಡಿದ್ದು ನಾನು ಇನ್ನು ಜೀವಂತವಾಗಿದ್ದೇನೆ ಎಂದಿದ್ದಾರೆ.


    ಈ ಬಗ್ಗೆ ಮಾಹಿತಿ ನೀಡಿರುವ ಹೀತ್ ಸ್ಟ್ರೀಕ್, ನಾನು ಇನ್ನು ಜೀವಂತವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ತಡರಾತ್ರಿ, ಅವರ ಸಹ ಆಟಗಾರ ಹೆನ್ರಿ ಒಲಂಗಾ ಅವರು, ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಆ ಬಳಿಕ ಸ್ಟ್ರೀಕ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಹೆನ್ರಿ ಒಲಂಗಾ ಅವರು ಇದೀಗ ತಾವು ಮೊದಲು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ಹೊಸ ಟ್ವೀಟ್​ನಲ್ಲಿ ಸ್ಟ್ರೀಕ್ ಅವರೊಂದಿಗಿನ ಸಂಭಾಷಣೆಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.

    ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿರುವ ಹೀತ್ ಸ್ಟ್ರೀಕ್, 216 ಟೆಸ್ಟ್ ವಿಕೆಟ್‌ ಮತ್ತು 239 ವಿಕೆಟ್‌ಗಳನ್ನು ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply