LATEST NEWS
ಕುಡುಪು ದೇವಸ್ಥಾನದ ಅನ್ನದ ಮೇಲೆ ಹಾವು ಸುದ್ದಿ ಸುಳ್ಳು
ಕುಡುಪು ದೇವಸ್ಥಾನದ ಅನ್ನದ ಮೇಲೆ ಹಾವು ಸುದ್ದಿ ಸುಳ್ಳು
ಮಂಗಳೂರು ಫೆಬ್ರವರಿ 26: ದಕ್ಷಿಣ ಭಾರತದ ಪ್ರಸಿದ್ದ ನಾಗಾರಾಧನೆ ಪುಣ್ಯಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶತಮಾನದ ಅದ್ದೂರಿ ಬ್ರಹ್ಮಕಲಶೋತ್ಸವ ವಿದ್ಯುಕ್ತವಾಗಿ ನೆರವೇರಿತು. ಬ್ರಹ್ಮಕಲಶೋತ್ಸನ ನಿಮಿತ್ತ ನಿರಂತರ ಅನ್ನದಾಸೋಹ ಕಾರ್ಯಕ್ರಮ ಕೂಡ ನಡೆಯಿತು.
ಈ ನಡುವೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದಕ್ಕಿಂತ ಮುಂಚೆ ಅನ್ನದ ರಾಶಿಗೆ ಪಲ್ಲ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಜೀವಂತ ಸರ್ಪವೊಂದು ಅನ್ನದರಾಶಿಯ ಮೇಲೆ ಇತ್ತು ಎಂಬ ಸುದ್ದಿ ಮತ್ತು ಚಿತ್ರವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು , ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಆದರೆ ಇದು ನಾಗಾರಾಧನೆಯ ಕ್ಷೇತ್ರವಾದ್ದರಿಂದ ಅನ್ನದರಾಶಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಹಾವಿನ ರೂಪದ ಮರದ ಮೂರ್ತಿಯನ್ನಿಡುವ ಸಂಪ್ರದಾಯವಿದ್ದು, ಅದನ್ನೆ ನಿಜ ಹಾವೆನ್ನುವಂತೆ ಬಿಂಬಿಸಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ, ಅದು ಅಲ್ಲದೇ ಬಿಸಿ ಅನ್ನದಲ್ಲಿ ಹಾವು ಬರಲು ಸಾಧ್ಯವಿಲ್ಲ,
ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.ಇಂತಹ ಸುಳ್ಳು ಸುದ್ದಿಗಳಿಂದ ನಮ್ಮ ಹಿಂದೂ ದೇವಾಲಯಗಳ ಪಾವಿತ್ರ್ಯತೆಯನ್ನು ನಾವೇ ಹಾಳುಮಾಡುತ್ತಿದ್ದೇವೆ. ಹಾಗಾಗಿ ಇಂತಹ ಅಪಪ್ರಚಾರಗಳಿಂದ ಆಸ್ತಿಕರ ಭಾವನೆಗಳಿಗೆ ಅವಮಾನಿಸುವುದು ಸರಿಯಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.