FILM
ತನ್ನ ಅಂಕಲ್ ನೀಡಿದ್ದ ಲೈಂಗಿಕ ಕಿರುಕುಳವನ್ನು ತಮ್ಮ ಓಪನ್ ಬುಕ್ ಪುಸ್ತಕದಲ್ಲಿ ಬರೆದ ಕುಬ್ರಾ ಸೇಠ್
ಬೆಂಗಳೂರು ಜೂನ್ 06: ಹಿಂದಿ ವೆಬ್ ಸೀರಿಸ್ ಗಳಲ್ಲಿ ನಟಿಸಿ ಜನಪ್ರಿಗೊಂಡಿರುವ ನಟಿ ಕುಬ್ರಾ ಸೇಠ್ ಅವರು ತಮ್ಮ ಹೊಸ ಪುಸ್ತಕದಲ್ಲಿ ತಾನು 17 ವರ್ಷದವಳಿದ್ದಾಗ ತನ್ನ ಅಂಕಲ್ ನೀಡಿದ್ದ ಲೈಂಗಿಕ ಕಿರುಕುಳವನ್ನು ಬರೆದಿದ್ದಾರೆ.
ನಾನು 17 ವರ್ಷದವಳಿದ್ದಾಗ, ನಮ್ಮ ಕುಟುಂಬಕ್ಕೆ ಪರಿಚಿತವಾಗಿದ್ದ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಅಂಕಲ್ ಪದೇ ಪದೇ ನಮ್ಮ ಮನೆಗೆ ಬರುತ್ತಿದ್ದರು. ನಾವು ಕೂಡ ಅವರ ರೆಸ್ಟೋರೆಂಟ್ಗೆ ಹೋಗುತ್ತಿದ್ದೇವು. ಅವರು ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರು.
ಆದರೆ ಮನೆಗೆ ಬಂದಾಗ ನನ್ನ ಕುತ್ತಿಗೆಗೆ ಮುತ್ತು ಕೊಡುತ್ತಿದ್ದರು. ಕೆಲವು ಸಲ ತುಟಿಗಳಿಗೂ ಮುತ್ತು ಕೊಟ್ಟಿದ್ದರು. ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ತೊಡೆ ಸವರಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಅವರು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರಿಂದ ನಾನು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆ. ಒಂದು ದಿನ ನನ್ನ ಹೊಟೇಲ್ಗೆ ಕರೆದುಕೊಂಡು ಹೋಗಿ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದರು. ಆಗ ನಾನು ಶಾಕ್ ಆಗಿದ್ದೆ, ಯಾರ ಬಳಿಯೂ ಹೇಳಿಕೊಳ್ಳದ ಸ್ಥಿತಿಯಲ್ಲಿ ನಾನಿದ್ದೆ ಎಂದು ಕುಬ್ರಾ ಹೇಳಿದ್ದಾರೆ.