DAKSHINA KANNADA
ಪುತ್ತೂರು – ಕೆ.ಎಸ್.ಆರ್.ಟಿ.ಸಿ ನೌಕರರ ಉಪವಾಸ ಸತ್ಯಾಗ್ರಹ ಅಂತ್ಯ
ಪುತ್ತೂರು ಅಕ್ಟೋಬರ್ 26: ಕೆಎಸ್ಆರ್ ಟಿಸಿ ನೌಕರರಿಗೆ ವೇತನ ಹಾಗೂ ನಿವೃತ್ತಿ ಪಡೆದವರಿಗೆ ಸೌಲಭ್ಯ ನೀಡುವಂತೆ ಕಳೆದ ಎರಡು ದಿನಗಳಿಂದ ಕೆಎಸ್ಆರ್ ಟಿಸಿ ನೌಕರರು ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯವಾಗಿದೆ.
ಬಿಎಂಎಸ್ ಸಂಘಟನೆ ನೇತೃತ್ವದಲ್ಲಿ ಪುತ್ತೂರಿನ ಮಿನಿ ವಿಧಾನಸೌಧದ ಎದುರು ನಡೆಯುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರ ಮಧ್ಯಪ್ರವೇಶದಿಂದ ಕೊನೆಗೊಂಡಿದ್ದು, ಸತ್ಯಾಗ್ರಹ ನಿರತರಿಗೆ ಜ್ಯೂಸ್ ನೀಡಿ ಸತ್ಯಾಗ್ರಹ ಅಂತ್ಯಗೊಳಿಸಲಾಗಿದೆ.
ಉಸ್ತುವಾರಿ ಸಚಿವ ಅಂಗಾರ ಒಂದು ತಿಂಗಳ ಒಳಗೆ ಕೆಎಸ್ ಆರ್ ಟಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ಭರವಸೆಯ ಹಿನ್ನಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಲಾಗಿದ್ದು, ಕೆ.ಎಸ್.ಆರ್.ಟಿ.ಸಿ ಯ 220 ಕೋಟಿ ಅಸ್ತಿ ಅಡವಿಟ್ಟು ನೌಕರರ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಪ್ರತಿಭಟನಾ ನಿರತರಿಗೆ ಮಾಹಿತಿ ನೀಡಿದ್ದಾರೆ.