Connect with us

    LATEST NEWS

    ಅಕ್ಟೋಬರ್ 28 ರಿಂದ ಮೂರು ದಿನ ಮಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತ

    ಮಂಗಳೂರು ಅಕ್ಟೋಬರ್ 26: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆಯ ಎಲ್‌ಎಲ್‌ಪಿಎಸ್‌ 1 -18 ಎಂಜಿಡಿ ಮತ್ತು 81.7 ಎಂಎಲ್‌ಡಿ ರೇಚನ ಸ್ಥಾವರದ ಜಾಕ್‌ವೆಲ್‌ನಲ್ಲಿರುವ ತುರ್ತು ಕಾಮಗಾರಿ ಇರುವ ಕಾರಣ ಅಕ್ಟೋಬರ್ 28 ರಂದು ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 30ರ ಬೆಳಗ್ಗೆ 6 ರ ವರೆಗೆ ಮೂರು ದಿನಗಳ ಕಾಲ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದೆಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.


    ಈ ಹಿನ್ನಲೆ ನಗರಕ್ಕೆ ಮೂರು ದಿನ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply