LATEST NEWS
ಭಾರಿ ಮಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ
ಭಾರಿ ಮಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು ಅಗಸ್ಟ್ 15: ಕರಾವಳಿಯಲ್ಲಿ ಸುರಿಯುತ್ತಿರು ಭಾರಿ ಮಳೆ ಹಿನ್ನಲೆ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಢಿ ಘಾಟ್ ನಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿರುವ ಹಿನ್ನಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಎಲ್ಲಾ ರೀತಿಯ ವೋಲ್ವೋ, ರಾಜಹಂಸ ಬಸ್ ಸಂಚಾರ ನಿಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮಂಗಳೂರು – ಬೆಂಗಳೂರು ಸಂಪರ್ಕವನ್ನೆ ಕಡಿತಗೊಳಿಸಿದೆ. ನಿನ್ನೆ ಶಿರಾಢಿ, ಮಡಿಕೇರಿ ಘಾಟ್ ಸೇರಿದಂತೆ ಹಲವೆಡೆ ಭೂಕುಸಿತ ಉಂಟಾಗಿದ್ದರಿಂದ ಕೆಎಸ್ ಆರ್ ಟಿಸಿ ಸುಮಾರು 89 ಬಸ್ ಗಳ ಸಂಚಾರವನ್ನು ರದ್ದುಗೊಳಿಸಿತ್ತು. ಇಂದು ಸಹ ಪರಿಸ್ಥಿತಿ ಮುಂದುವರೆದಿದ್ದರಿಂದ ಕೆಎಸ್ ಆರ್ ಟಿಸಿ ಮಂಗಳೂರಿನಿಂದ ಬೆಂಗಳೂರಿಗೆ ಎಲ್ಲಾ ರೀತಿಯ ವೋಲ್ವೋ, ರಾಜಹಂಸ ಬಸ್ ಸಂಚಾರ ನಿಲ್ಲಿಸಿದೆ.
ಕರ್ನಾಟಕ ಸಾರಿಗೆ ಬಸ್ಸು(ಕೆಂಪು ಬಸ್ಸು) ಗಳು ಮಾತ್ರ ಚಾರ್ಮಾಡಿ ಮಾರ್ಗದಲ್ಲಿ ಬೆಂಗಳೂರಿಗೆ ಸಂಚರಿಸುತ್ತಿವೆ. ಈಗಾಗಲೇ ವೋಲ್ವೋ ಟಿಕೆಟ್ ಬುಕ್ ಮಾಡಿದವರಿಗೆ 100% ರೀಫಂಡ್ ಮಾಡಲಾಗುವುದು ಎಂದು ಕೆಎಸ್ಆರ್ ಟಿಸಿ ಡಿಸಿ ತಿಳಿಸಿದ್ದಾರೆ.