DAKSHINA KANNADA
ಕೆಎಸ್ ಆರ್ ಟಿಸಿ ಬಸ್ ಸಿಬ್ಬಂದಿಯ ಅಳಲು…ಮಹಿಳಾ ಪ್ರಯಾಣಿಕರು ಮಾತೆ ಕೇಳೋದಿಲ್ಲ…!!
ಪುತ್ತೂರು ಜೂನ್ 24: ರಾಜ್ಯ ಸರಕಾರದ ಬಸ್ ಫ್ರೀ ಯೋಜನೆಯಿಂದಾಗಿ ಮಹಿಳೆಯರು ಖುಷಿಯಾಗಿದ್ದಾರೆ. ಆದರೆ ಕೆಎಸ್ಆರ್ ಟಿಸಿ ಸಿಬ್ಬಂದಿಗಳ ಪಾಡು ಮಾತ್ರ ಹೇಳ ತೀರದು. 54 ಜನರನ್ನು ಕೂರಿಸಿಕೊಂಡು ಹೋಗಬೇಕಿದ್ದ ಬಸ್ ನಲ್ಲಿ ಇದೀಗ 90ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದು, ಅದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಬಸ್ ನ ಸಿಬ್ಬಂದಿಗಳ ಮಾತು ಕೇಳದ ಪರಿಸ್ಥಿತಿಯಲ್ಲಿದ್ದಾರೆ.
ರಾಜ್ಯ ಸರಕಾರ ಶಕ್ತಿ ಯೋಜನೆಯಲ್ಲಿ ಸಾರಿಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕೊಟ್ಟ ಬೆನ್ನಲ್ಲೆ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ತುಂಬಿ ತುಳುಕುತ್ತಿದ್ದ ದೇವಸ್ಥಾನದಲ್ಲಿ ಈ ವಾರ ಮಹಿಳಾ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ವಾರಾಂತ್ಯದಲ್ಲಿ ತುಂಬಿ ತುಳುಕುತ್ತಿದ್ದ ಸರಕಾರಿ ಬಸ್ ಗಳು ಖಾಲಿ ಖಾಲಿಯಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದಾಗ ಬಸ್ಸಿನ ಸಿಬ್ಬಂದಿ ಕಂಗೆಟ್ಟು ಹೋಗಿದ್ದರು.
ಬಸ್ ಗಳಲ್ಲಿ ಕೇವಲ 54 ಸೀಟಿನ ವ್ಯವಸ್ಥೆ ಇರೋದು. ಆದರೆ ಈಗ 90 ಕ್ಕೂ ಮಿಕ್ಕಿದ ಪ್ರಯಾಣಿಕರನ್ನು ಕರೆತರಬೇಕಾದ ಅನಿವಾರ್ಯತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರೇ ಬರುತ್ತಿದ್ದಾರೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಸ್ಸಿನಲ್ಲಿರುವ ಪರಿಕರಗಳನ್ನು ಹಾಳು ಮಾಡುತ್ತಿದ್ದಾರೆ, ಕಿಟಕಿ, ಗಾಜುಗಳನ್ನು ಪುಡಿಮಾಡುತ್ತಿದ್ದಾರೆ. ಕೆಲವು ಮಹಿಳೆಯರನ್ನು ನಿಯಂತ್ರಿಸುವುದೇ ಇವರಿಗೆ ಕಷ್ಟ ಸಾಧ್ಯವಾಗಿ ಹೋಗಿತ್ತು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.