LATEST NEWS
ಉಡುಪಿ – ಮಳೆಗೆ ಮನೆಯ ಮೇಲೆ ಬಿದ್ದ ಆವರಣ ಗೋಡೆ
ಉಡುಪಿ ಜೂನ್ 24: ಕರಾವಳಿಯಲ್ಲಿ ಮುಂಗಾರು ಮಳೆ ತನ್ನ ಅಬ್ಬರ ತೋರಿಸಲು ಪ್ರಾರಂಭಿಸಿದ್ದು. ಇದೀಗ ಉಡುಪಿಯಲ್ಲಿ ಸುರಿದ ಮಳೆಗೆ ಕೆಲವು ಕಡೆ ಹಾನಿಯುಂಟಾಗಿದೆ. ಉಡುಪಿಯಲ್ಲಿ ಸುರಿದ ಜಡಿ ಮಳೆಗೆ ಮನೆಯೊಂದರ ಮೇಲೆ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಬಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ನಡೆದಿದೆ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆ ಮಾಲಕಿ ಸುಮಾ ರಮೇಶ್ ಆಚಾರ್ಯ ಬೆಕ್ಕಿಗೆ ತಿಂಡಿ ಹಾಕಲು ಹೊರ ಬಂದಿದ್ದಾಗ ಈ ಘಟನೆ ನಡೆದಿದ್ದರಿಂದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
You must be logged in to post a comment Login