Connect with us

    DAKSHINA KANNADA

    ಕಡಬ – ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಶಂಕೆ…!!

    ಪುತ್ತೂರು ಜೂನ್ 24: ಕಡಬದ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹಾಗೂ ಶೌರ್ಯ ತಂಡದ ಸದಸ್ಯರು ಹುಡುಕಾಟ ನಡೆಸುತ್ತಿದ್ದಾರೆ.

    ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿದ್ದಾರೆ ಎಂದು ಹೇಳಲಾಗಿದ್ದು, ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಇವರು ಬಂದಿದ್ದರು ಎಂದು ಹೇಳಲಾಗಿದ್ದು. ನದಿ ಬದಿಯಲ್ಲಿ ವ್ಯಕ್ತಿಯ ಶೂ ಪತ್ತೆಯಾಗಿದೆ.
    ಸ್ಥಳಕ್ಕೆ ಕಡಬ ಪೋಲಿಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದು, ಕಡಬ ಪೊಲೀಸರು, ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply