DAKSHINA KANNADA
ಕಂಡಕ್ಟರ್ ಗಳ ದೋಚುವ ಅಕೌಂಟೆಂಟ್, ಸಚಿವ ರೈ ಕೃಪಾಕಟಾಕ್ಷದಿಂದ ಬಿ.ಸಿ.ರೋಡ್ ನಲ್ಲೇ ಈತನಿಗೆ ಟೆಂಟ್
ಕಂಡಕ್ಟರ್ ಗಳ ದೋಚುವ ಅಕೌಂಟೆಂಟ್, ಸಚಿವ ರೈ ಕೃಪಾಕಟಾಕ್ಷದಿಂದ ಬಿ.ಸಿ.ರೋಡ್ ನಲ್ಲೇ ಈತನಿಗೆ ಟೆಂಟ್
ಪುತ್ತೂರು ಫೆಬ್ರವರಿ 14: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಗಳಿಗೆ ಬಸ್ ನಲ್ಲಾದ ಕಲೆಕ್ಷನ್ ಮೇಲೆ ಎರಡು ಶೇಕಡಾ ಇನ್ಸೆಂಟೀವ್ ನೀಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಯೋರ್ವರು ಲಂಚ ಸ್ವೀಕರಿಸುತ್ತಿರುವ ವಿಡಿಯೋ ಇದೀಗ ಹರಿದಾಡುತ್ತಿದೆ.
ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗದ ಬಿ.ಸಿ.ರೋಡ್ ಘಟಕದ ಅಕೌಂಟೆಂಟ್ ಯೂಸುಫ್ ಬ್ಯಾರಿ ಎನ್ನುವ ಅಧಿಕಾರಿ ಇನ್ಸೆಂಟೀವ್ ಫೈಲ್ ಮಾಡಲು ಪ್ರತಿ ಬಸ್ ನ ಕಂಡಕ್ಟರ್ ನಿಂದ 10 ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟಕದ ಸಿಬ್ಬಂದಿಗಳೇ ಇದನ್ನು ಚಿತ್ರೀಕರಿಸಿ ಮಾಧ್ಯಮಗಳಿಗೂ ನೀಡಿದ್ದಾರೆ.
10 ರೂಪಾಯಿ ಲಂಚ ನೀಡದೇ ಇದ್ದ ಕಂಡಕ್ಟರ್ ಗಳ ಮೇಲೆ ಹಗೆ ಸಾಧಿಸುವ ಈ ಅಧಿಕಾರಿ ಉದ್ಧೇಶಪೂರ್ವಕವಾಗಿ ಕೆಟ್ಟು ಹೋದ ಟಿಕೆಟ್ ಮಿಷಿನ್ ಗಳನ್ನು ಕಂಡಕ್ಟರ್ ಗಳಿಗೆ ನೀಡುತ್ತಾನೆ ಎಂದು ಹೇಳಲಾಗಿದೆ. ಇದರಿಂದಾಗಿ ಕಂಡಕ್ಟರ್ ಗಳು ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ಮಿಷನ್ ಕೈಕೊಟ್ಟು ನಷ್ಟ ಅನುಭವಿಸಬೇಕಾಗುತ್ತದೆ. ಈ ಕಿರಿಕಿರಿಯನ್ನು ತಪ್ಪಿಸಲು ಕಂಡಕ್ಟರ್ ಬೇರೆ ವಿಧಿಯಿಲ್ಲದೆ ಈ ಅಧಿಕಾರಿಗೆ ಲಂಚ ನೀಡುವುದು ಅನಿವಾರ್ಯವಾಗಿದೆ.
ಕಂಡಕ್ಟರ್ ಗಳು 2 ರೂಪಾಯಿ ಹೆಚ್ಚು ಕಡಿಮೆ ಮಾಡಿದರೂ ಸೇವಾ ಅಮಾನತಿನಂತಹ ಶಿಕ್ಷೆ ನೀಡುವ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಇಂಥ ಅಧಿಕಾರಿ ರಾಜಾರೋಷವಾಗಿ ಲಂಚ ಸ್ವೀಕರಿಸುತ್ತಿರುವ ಕಣ್ಣಿಗೆ ಕಾಣುತ್ತಿಲ್ಲವೇ ಎನ್ನುವ ಆಕ್ರೋಶವೂ ಇದೇ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿಗಳ ಆರೋಪವಾಗಿದೆ.
ಕಂಡಕ್ಟರ್ ಗಳಿಗೆ ಸಭ್ಯತೆಯ ಹಾಗೂ ಪ್ರಾಮಾಣಿಕ ಪಾಠ ಹೇಳುವ ಅಧಿಕಾರಿಗಳೇ ಲಂಚ ಸ್ವೀಕರಿಸು ಪಾಠವನ್ನೂ ಹೇಳಿಕೊಡುತ್ತಿರುವುದು ನಿಜಕ್ಕೂ ದುರಂತವಾಗಿದೆ.
ಸಚಿವ ರಮಾನಾಥ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈ ಅಧಿಕಾರಿ 2009 ರಿಂದ ಬಿ.ಸಿ.ರೋಡ್ ಘಟಕದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇಲಾಖೆಯ ನಿಯಮದ ಪ್ರಕಾರ ಒರ್ವ ಅಧಿಕಾರಿ ಮೂರು ವರ್ಷ ಕಾಲ ಒಂದು ಘಟಕದಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದ್ದರೂ ಈ ಅಧಿಕಾರಿ ಮಾತ್ರ ತನ್ನ ರಾಜಕೀಯ ಪ್ರಭಾವ ಬಳಸಿ ಕಳೆದ 9 ವರ್ಷಗಳಿಂದ ಕಂಡಕ್ಟರ್ ಗಳಿಂದ ಸುಲಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
You must be logged in to post a comment Login