KARNATAKA
ದೇಶದಲ್ಲಿ ಮೊದಲ ಬಾರಿಗೆ ಬಸ್ ನಲ್ಲಿ ಪುರುಷರಿಗೆ 50 % ಸೀಟ್ ಮೀಸಲು
ಬೆಂಗಳೂರು ಜೂನ್ 03: ಸಾರಿಗೆ ಬಸ್ ಗಳಲ್ಲಿ ಮೊದಲ ಬಾರಿಗೆ ಪುರುಷರಿಗೆ ಸೀಟ್ ಮೀಸಲು ಇರಿಸಿದ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದಿದೆ. ಇಷ್ಟು ದಿನ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಆಸನ ಮೀಸಲು ಎಂದು ಫಲಕ ಹಾಕಿರುವುದು ನೋಡಿದ್ದೇವೆ. ಇನ್ನು ಮುಂದೆ ಪುರುಷರಿಗೆ ಆಸನ ಮೀಸಲು ಎಂಬ ಫಲ ಬರಲಿದೆ
ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿಯಾಗಿದೆ. ಜೂನ್ 11 ರಿಂದ ಅನುಷ್ಠಾನವಾಗುತ್ತಿದೆ. ಆ ಯೋಜನೆಯಲ್ಲಿ ಒಂದು ಕಂಡಿಷನ್ ಹಾಕಿದ್ದು, ಬಸ್‌ಗಳಲ್ಲಿ ಶೇ.50 ರಷ್ಟು ಆಸನ ಪುರುಷರಿಗೆ ಮೀಸಲು ಎಂದು ತಿಳಿಸಲಾಗಿದೆ. ಹೀಗಾಗಿಯೇ ಎಲ್ಲಾ ಬಸ್‌ಗಳಲ್ಲಿಯೂ ಅರ್ಧದಷ್ಟು ಆಸನಗಳಲ್ಲಿ ಪುರುಷರಿಗೆ ಮೀಸಲು ಎಂಬ ಫಲಕ ಬರಲಿದೆ.
ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಲಭ್ಯವಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್ ಪ್ರಯಾಣಕ್ಕೆ ಮುಂದಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡುವ ಪುರುಷರಿಗೆ ಆಸನ ಕೊರತೆಯಾಗಬಹುದು. ಇದರಿಂದ ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಮತ್ತಷ್ಟು ಕತ್ತರಿ ಬೀಳಲಿದೆ. ಹೀಗಾಗಿ, ಪುರುಷರಿಗೆ ಬಸ್‌ನಲ್ಲಿ ಆಸನಗಳನ್ನು ಮೀಸಲಿಡಲಾಗುತ್ತಿದೆ.