Connect with us

LATEST NEWS

ಮಂಗಳೂರು – ಕೆಎಸ್ಆರ್ ಪಿ ಸಿಬ್ಬಂದಿ ಆತ್ಮಹತ್ಯೆ

ಮಂಗಳೂರು ಫೆಬ್ರವರಿ 19: ಕೆಎಸ್ಆರ್ ಪಿಯ 7 ನೇ ಬೆಟಾಲಿಯನ್ ನ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಸೈಟ್‌ನಲ್ಲಿ ಇಂದು ಸಂಜೆ ಬೆಳಕಿಗೆ ಬಂದಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ಬೆಳಗಾಂ ನಿವಾಸಿ ವಿಮಲನಾಥ ಜೈನ್ (28) ಎಂದು ಗುರುತಿಸಲಾಗಿದ್ದು, ಇವರು ಕೆಎಸ್ಆರ್ ಪಿಯ 7 ನೇ ಬೆಟಾಲಿಯನ್ ಕೆಲಸ ನಿರ್ವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದು:ಖದಲ್ಲಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನೂತನ ಬ್ಯಾಚ್‌ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ ಕೃತ್ಯ ಎಸಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *