LATEST NEWS
ತನಿಖೆ ಮುಗಿಯದೇ ಮಾಧ್ಯಮಗಳಿಗೆ ಗಲಭೆ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ – ದಿನೇಶ್ ಗುಂಡೂರಾವ್

ತನಿಖೆ ಮುಗಿಯದೇ ಮಾಧ್ಯಮಗಳಿಗೆ ಗಲಭೆ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ – ದಿನೇಶ್ ಗುಂಡೂರಾವ್
ಉಡುಪಿ ಡಿಸೆಂಬರ್ 24: ಮಂಗಳೂರು ಗಲಭೆ ವಿಡಿಯೋಗಳನ್ನು ಪೊಲೀಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಯಾಕೆ, ಈಗಾಗಲೇ ಸಿಐಡಿ ತನಿಖೆಗೆ ಪ್ರಕರಣ ವಹಿಸಲಾಗಿದೆ. .ತನಿಖೆ ಮುಗಿದ ಮೇಲೆ ಬಿಡುಗಡೆ ಮಾಡಬಹುದಿತ್ತು ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರು ಗಲಭೆ ಕುರಿತಂತೆ ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು, ಸಿ.ಐ.ಡಿ,ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ನಮಗೆ ವಿಶ್ವಾಸ ವಿಲ್ಲ, ಕಮಿಷನರ್,ಇಬ್ಬರು ಇನ್ಸ್ಪೆಕ್ಟರ್ ಮೇಲೆ ಶಂಕೆ ಇದೆ ಎಂದು ಆರೋಪಿಸಿದರು.

ಪ್ರತಿಭಟನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕೊಡಬೇಕಿತ್ತು. ಬೆಂಗಳೂರಲ್ಲಿ ನಿನ್ನೆ ಶಾಂತಿಯುತ ಪ್ರತಿಭಟನೆ ಆಗಿದೆ. ಮಂಗಳೂರು ಪೋಲಿಸರಿಗೆ ಪರಿಸ್ಥಿತಿ ಹ್ಯಾಂಡಲ್ ಮಾಡ್ಲಿಕ್ಕೆ ಆಗಿಲ್ಲ. ಅಲ್ಲದೆ ಮಂಗಳೂರು ಪೊಲೀಸರು ಪ್ರಚೋದನಕಾರಿಯಾಗಿ ನಡೆದುಕೊಂಡಿದ್ದು, ಇದರಿಂದಾಗಿ ಅಮಾಯಕರು ಸತ್ತು ಹೋಗಿದ್ದಾರೆ. ಇದು ಸರಕಾರದ ವೈಫಲ್ಯ ತೋರಿಸುತ್ತದೆ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದರು.