Connect with us

    LATEST NEWS

    ಮಂಗಳೂರು ಗಲಭೆ ಸೃಷ್ಠಿಸಿದವರ ವಿಡಿಯೋ ಕೇಳಿದ ಪೊಲೀಸ್ ಆಯುಕ್ತರ ಟ್ವೀಟ್ ಗೆ ಬಂತು ಪೊಲೀಸರ ದಾಳಿಯ ವಿಡಿಯೋ…!

    ಮಂಗಳೂರು ಗಲಭೆ ಸೃಷ್ಠಿಸಿದವರ ವಿಡಿಯೋ ಕೇಳಿದ ಪೊಲೀಸ್ ಆಯುಕ್ತರ ಟ್ವೀಟ್ ಗೆ ಬಂತು ಪೊಲೀಸರ ದಾಳಿಯ ವಿಡಿಯೋ…!

    ಮಂಗಳೂರು ಡಿಸೆಂಬರ್ 24: ಕಳೆದ ವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಗಲಭೆ ಈಗ ಪೊಲೀಸರಿಗೆ ಕಂಟಕವಾಗುವ ಪರಿಸ್ಥಿತಿ ತಂದೊಡ್ಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರು ಮಾಡಿದ ದಾಳಿಗಳೆನ್ನಲಾದ ವಿಡಿಯೋಗಳು ಹರಿದಾಡುತ್ತಿದೆ.

    ಈ ನಡುವೆ ಪೊಲೀಸ್ ಆಯುಕ್ತರು ಮಂಗಳೂರಿನಲ್ಲಿ ಗಲಭೆ ಸೃಷ್ಟಿಸಿದವರ ಫೊಟೊ, ವಿಡಿಯೊಗಳಿದ್ದರೆ ಪೊಲೀಸ್‌ ಇಲಾಖೆಗೆ ಕಳುಹಿಸಿಕೊಡಿ ಎಂದು ಟ್ವೀಟ್‌ ಮಾಡಿದ್ದು, ಮಂಗಳೂರು ನಗರ ಪೊಲೀಸ್‌ ಆಯುಕ್ತ ಹರ್ಷ ಅವರಿಗೆ ಟ್ವಿಟ್ ರಿಗರು ಪೊಲೀಸರ ದಾಳಿಯ ವಿಡಿಯೋಗಳನ್ನು ಟ್ಯಾಗ್‌ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಮಂಗಳೂರು ಗಲಭೆ ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಗೊಲೀಬಾರ್ ನಲ್ಲಿ ಮೃತರು ಸೇರಿದಂತೆ ಹಲವರು ಮೇಲೆ ಪ್ರಕರಣ ದಾಖಲಾಗಿದೆ. ಆದರೆ ತನಿಖೆಗೆ ಗಲಭೆಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆ ಪೊಲೀಸ್ ಆಯುಕ್ತರು ಗಲಭೆಯ ತನಿಖೆಗೆ ಪೂರಕ ಸಾಕ್ಷ್ಯ ಬಯಸಿ ಸೋಮವಾರ ಟ್ವೀಟ್‌ ಮಾಡಿದ್ದರು. ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಫೊಟೊಗಳು, ವಿಡಿಯೊಗಳು ನಿಮ್ಮ ಬಳಿ ಇದ್ದರೆ ನಮಗೆ ಕಳುಹಿಸಿಕೊಡಿ. ಪೊಲೀಸರ ತನಿಖೆಗೆ ಅದು ಸಹಕಾರಿಯಾಗಲಿದೆ,’ ಎಂದು ಹೇಳಿ, ಇ–ಮೇಲ್‌, ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ನೀಡಿದ್ದರು.

    https://twitter.com/Zubairp78Ck/status/1209031762237632512

    ಆದರೆ ಪೊಲೀಸ್ ಆಯುಕ್ತರ ಈ ಟ್ವೀಟ್ ಗೆ ಪೊಲೀಸರಿಗೆ ಸಾಕ್ಷ್ಯಗಳ ಬದಲಾಗಿ. ಡಿಸೆಂಬರ್ 19 ರಂದು ಪೊಲೀಸರು ನಡೆಸಿದ್ದರು ಎನ್ನಲಾದ ಹಲ್ಲೆ , ದಾಳಿ ವಿಡಿಯೋಗಳನ್ನು ಟ್ಯಾಗ್ ಮಾಡಿ ಪೊಲೀಸರ ವಿರುದ್ದ ಯಾವ ರೀತಿ ಕ್ರಮಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
    ಬಹುತೇಕ ಟ್ವೀಟ್ ಗಳಲ್ಲಿ ಪೊಲೀಸರು ಕಲ್ಲು ತೂರಾಟ, ಹಲ್ಲೆ ನಡೆಸುತ್ತಿರುವುದು, ಸಾರ್ವಜನಿಕರಿಗೆ ಲಾಠಿ ರುಚಿ ತೋರಿಸುತ್ತಿರುವ ವಿಡಿಯೋಗಳೇ ಇದ್ದು, ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಆದರಿಸಿ ಟ್ವಿಟರ್ ಬಳಕೆದಾರ ಸಾರ್ವಜನಿಕರಿಗೆ ಸಾಕ್ಷ್ಯ ಕೊಡಿ ಎಂದು ಟ್ಟಿಟ್ ಮಾಡಿದ್ದು, ನೀವು ಹೇಳಿದ ಹಾಗೆ 7000 ಪ್ರತಿಭಟನಾಕಾರರು ಮಂಗಳೂರಿನಲ್ಲಿ ಸೇರಿದ್ದರು. ಅವರೆಲ್ಲರೂ ಪೊಲೀಸ್‌ ಠಾಣೆಗೆ ಬೆಂಕಿಹಚ್ಚಲು ಪ್ರಯತ್ನಿಸಿದ್ದರು. ಪೊಲೀಸರನ್ನು ಕೊಲ್ಲಲು ಪ್ರಯತ್ನಿಸಿದರು. ಈ ವೇಳೆ 37 ಪೊಲೀಸರಿಗೆ ಗಾಯಗಳಾಗಿವೆ ಎಂಬ ನಿಮ್ಮ ಹೇಳಿಕೆಗೆ ಸಂಬಂಧಿಸಿಂತೆ ಫೊಟೊ, ವಿಡಿಯೊಗಳಿದ್ದರೆ ನಮಗೆ ಶೇರ್‌ ಮಾಡಿ ಎಂದು @rammi.bk ಎಂಬ ಟ್ವಿಟರ್‌ ಬಳಕೆದಾರರು ಗೇಲಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply