Connect with us

LATEST NEWS

ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾದರೆ ಲಾಕ್ ಡೌನ್ ಸಡಿಲಿಕೆ – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಜೂನ್ 03: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 10ಕ್ಕಿಂತ ಅಥವಾ 5ಕ್ಕಿಂತ ಕಡಿಮೆ ಬಂದರೆ ಸಡಿಲಿಕೆ ಮಾಡಬಹುದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ಸದ್ಯ ರಾಜ್ಯಸರಕಾರ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಮಾಡಲು ಗುರಿ ಇಟ್ಟುಕೊಂಡಿದ್ದು, ಒಂದು ವೇಳೆ ಪಾಸಿಟಿವಿಟಿ ರೇಟ್ ಕಡಿಮೆ ಆಗದೇ ಇದ್ರೆ ಇನ್ನೂ ಒಂದು ವಾರ ವಿಸ್ತರಣೆ ಮಾಡಬೇಕು ಎನ್ನುವ ಅಭಿಪ್ರಾಯ ಕೂಡ ಇದೆ ಎಂದರು. ಈ ನಡುವೆ ಮುಖ್ಯಮಂತ್ರಿಗಳಿಗೆ ಆದಷ್ಟು ಬೇಗ ಲಾಕ್ಡೌನ್ ತೆರವು ಮಾಡಬೇಕು ಅಂತ ಇದೆ, ಆದ್ರೆ ತೆರವು ಮಾಡಿ ಕೊರೊನಾ ಹೆಚ್ಚಾಗುತ್ತೆ ಎನ್ನುವ ಭಯ ಕೂಡ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.