LATEST NEWS
ಜಿಂದಾಲ್ ಗೆ ಭೂಮಿ ಮಾರಾಟ ಮುಖ್ಯಮಂತ್ರಿ ಮೊಂಡುತನ ಪ್ರದರ್ಶಿಸುತ್ತಿದ್ದಾರೆ – ಕೋಟ
ಜಿಂದಾಲ್ ಗೆ ಭೂಮಿ ಮಾರಾಟ ಮುಖ್ಯಮಂತ್ರಿ ಮೊಂಡುತನ ಪ್ರದರ್ಶಿಸುತ್ತಿದ್ದಾರೆ – ಕೋಟ
ಮಂಗಳೂರು ಜೂನ್ 2: ಜಿಂದಾಲ್ ಕಂಪನಿಗೆ 3666 ಎಕ್ರೆ ಭೂಮಿಯನ್ನು ಕೇವಲ 35 ಕೋಟಿ ರೂಪಾಯಿ ಪುಡಿಗಾಸಿಗೆ ಮಾರಾಟ ಮಾಡುವ ಅಗತ್ಯವಿದೆಯೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಜಿಂದಾಲ್ ಕಂಪನಿ 1500 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದೆ ಐದಾರು ಸಾವಿರ ಕೋಟಿ ಮೌಲ್ಯದ ಭೂಮಿಯನ್ನ 35 ಕೋಟಿಗೆ ಮಾರುತ್ತಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಸಚಿವ ಸಂಪುಟದ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪ ಕೂಡ ಕೇಳಿಬಂದಿದೆ ಎಂದು ಆರೋಪಿಸಿದ ಅವರು ಎಚ್.ಕೆ ಪಾಟೀಲ್, ಇದು ಆತಂಕಕಾರಿ ಬೆಳವಣಿಗೆ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರವನ್ನು ಕಡೆಗಣಿಸಿ ಮೊಂಡುತನ ಪ್ರದರ್ಶನ ಮಾಡುತ್ತಿದ್ದು.
ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದು ತಕ್ಷಣ ಈ ಯೋಜನೆಯನ್ನುರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಬೇಕಾದರೆ ಭೂಮಿ ಲೀಸ್ ಕೊಡುವುದಕ್ಕೆ ಅವಕಾಶ ಇದೆ ಮಾರಾಟ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದು. ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಯಲು ಸೀಮೆಗಳಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆ ರಾಜ್ಯ ಸರಕಾರಕ್ಕೆ ಎಟಿಎಂ ಇದ್ದಂತೆ. ಈಗಾಗಲೇ ಆರು ಸಾವಿರ ಕೋಟಿ ಖರ್ಚು ಮಾಡಿದ್ದು ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ದೊಡ್ಡ ನೀರಾವರಿ ಯೋಜನೆಗಳೆಲ್ಲ ಹಣ ಮಾಡುವ ಯೋಜನೆಗಳಾಗಿವೆ
ಯೋಜನೆ ಬಗ್ಗೆ ತನಿಖೆ ನಡೆಸ್ತೀನಿ ಎಂದಿದ್ದ ಸಿಎಂ ಮತ್ತಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ.
ಕರಾವಳಿಯಲ್ಲಿ ಕುಡಿಯುವ ನೀರಿಗೆ ಬರ ಬಂದಿರುವ ಬಗ್ಗೆ ಎರಡು ಜಿಲ್ಲೆಗಳ ಶಾಸಕರು ಸೇರಿ ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು ಅಲ್ಲದೆ ನೀರಿನ ಬರ ನೀಗಿಸಲು ಬದಲಿ ಯೋಜನೆಗಾಗಿ ಆಗ್ರಹಿಸಲಾಗುತ್ತದೆ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.