ಗೋವನ್ನು ಕೊಲ್ಲುವವನು ಮಾನವನೇ ಅಲ್ಲ ರಾಕ್ಷಸರಿಗೆ ಸಮಾನ – ಪೇಜಾವರ ಶ್ರೀ

ಉಡುಪಿ ಜೂನ್ 2: ಹಾಲು ಕುಡಿದ ಎಲ್ಲರ ತಾಯಿ ಗೋವು, ಗೋವಿನ ಹಾಲು ಕುಡಿದವನಿಗೆ ಗೋವನ್ನು ಕೊಲ್ಲುವಾಗ ಏನೂ ಅನ್ನಿಸೋದಿಲ್ಲವೇ, ಗೋವನ್ನು ಕೊಲ್ಲುವವ ಮಾನವನೇ ಅಲ್ಲ ಗೋವನ್ನು ಕೊಲ್ಲುವವ ರಾಕ್ಷಸ ಸಮಾನನಾಗಿದ್ದು, ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯ ಕೃತ್ಯ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಕೃಷ್ಣಮಠದಲ್ಲಿ ನಡೆಯುತ್ತಿರುವ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿದ ಅವರು ಗೋ ಹತ್ಯೆ ವಿಚಾರ ಗೋರಕ್ಷಣೆಗೆ ಸರಕಾರ ವಿಶೇಷ ಗಮನ ಕೊಡಬೇಕಾಗಿದ್ದು, ಕೇಂದ್ರದಲ್ಲಿ ಮೋದಿ ಸರಕಾರ ಬಲವಾಗಿ ಬಂದಿದ್ದು, ಬಿಜೆಪಿಗೆ ಬಹುಮತ ಇದೆ- ಯಾವ ಪಕ್ಷದ ಬೆಂಬಲ ಬೇಕಾಗಿಲ್ಲ ಹೀಗಾಗಿ ಮೋದಿ ಮೊದಲ ವರ್ಷದಲ್ಲೇ ದೃಢ ಕಾನೂನು ತರಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ದೇಶದಲ್ಲಿ ಹುಲಿ, ಸಿಂಹ ಸಂತಾನ ಉಳಿಸಲು ಸರಕಾರಗಳು ಕ್ರಮ ಕೈಗೊಳ್ಳುತ್ತದೆ ಆದರೆ ಗೋವಿನ ತಳಿ ಉಳಿಸಲು ಸರಕಾರ ಕ್ರಮ ಕೈಗೊಳ್ಳಲ್ಲ, ಸಿಂಹ ಹುಲಿಗಿಂತ ಗೋವು ಕೀಳಾಗಿಬಿಟ್ಟಿದೆ. ಗೋ ಸಾಗಾಟ , ಗೋವು ಕೊಲ್ಲುವ ವಿಧಾನ ಭಯಾನಕವಾಗಿದೆ. ಗೋವು ಮತ್ತು ಗೂಳಿಯ ರಕ್ಷಣೆಯೂ ಆಗಬೇಕು ಹಾಲು ಕೊಡುವ ಹಸುವಿರಬೇಕಾದರೆ ಎತ್ತು, ಕೋಣ ಇರಲೇಬೇಕು ದೇಸಿ ತಳಿಯ ರಕ್ಷಣೆ ಆಗಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

7 Shares

Facebook Comments

comments