ಧರ್ಮಸ್ಥಳದ ಬಾವಿಯಲ್ಲಿ ಭಾರಿ ಗಾತ್ರದ ಮೊಸಳೆ ಪತ್ತೆ

ಬೆಳ್ತಂಗಡಿ, ಜೂನ್ 03 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಖಾಲಿ ಬಾವಿಯಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ದಂಡೊಲೆಯ ಗ್ರಾಮದಲ್ಲಿನ ದಮೋದರ್ ಎಂಬವರ ಮನೆಯ ಬಾವಿಯಲ್ಲಿ ಈ ಭಾರಿ ಗಾತ್ರದ ಮೊಸಳೆ ಕಾಣ ಸಿಕ್ಕಿದೆ.

ನೇತ್ರಾವತಿ ನದಿ ತಟದಲ್ಲಿ ಈ ಗ್ರಾಮವಿದ್ದು ನದಿಯಿಂದ ಈ ಕಡೆಗೆ ವಲಸೆ ಬಂದ ಮೊಸಳೆ ಈ ಬಾವಿ ಸೇರಿಕೊಂಡಿದೆ ಎಂದು ಶಂಕಿಸಲಾಗಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಬಾವಿ ನೀರು ಬತ್ತಿಹೋಗಿದ್ದರಿಂದ ಈ ಮೊಸಳೆ ಗೋಚರಿಸಿದೆ.

ಈ ವಿದ್ಯಮಾನಗಳಿಂದ ಈ ಭಾಗದ ನೇತ್ರಾವತಿ ನದಿಯಲ್ಲಿ ಮೊಸಳೆಗಳು ವಾಸ್ತವ್ಯ ವಿರುವುದು ಧೃಡ ಪಟ್ಟಿದೆ.

ಮೊಸಳೆ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ನದಿ ತಟದ ಜನ ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

16 Shares

Facebook Comments

comments