LATEST NEWS
ಪಾಕಿಸ್ತಾನದ ಬೆಂಬಲಕ್ಕೆ ನಿಂತ ಮಹಾಘಟಬಂಧನದ ಕೆಲವು ಮುಖಂಡರು – ಕೋಟ ಶ್ರೀನಿವಾಸ ಪೂಜಾರಿ
ಪಾಕಿಸ್ತಾನದ ಬೆಂಬಲಕ್ಕೆ ನಿಂತ ಮಹಾಘಟಬಂಧನದ ಕೆಲವು ಮುಖಂಡರು – ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು ಮಾರ್ಚ್ 4: ಭಯೋತ್ಪಾದಕರ ಮೇಲೆ ಭಾರತದ ವಾಯುಸೇನೆ ದಾಳಿ ನಡೆಸಿದಾಗ ಸಂಭ್ರಮಾಚರಣೆ ಮಾಡದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿರುವುದು ಖಂಡನೀಯ.
ಆ ಹೇಳಿಕೆಯನ್ನು ಅವರು ವಾಪಸು ಪಡೆಯಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಯೋತ್ಪಾದನಾ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿರುವುದನ್ನು ಉಗ್ರ ಮಸೂದ್ ಅಜರ್ ನ ಸಹೋದರನೇ ಖಚಿತಪಡಿಸಿದ್ದಾನೆ.
ಆದರೆ ದೇಶದ ಮಹಾಘಟಬಂಧನದ ಕೆಲವು ಮುಖಂಡರು ಮತ್ತು ಭಾರತದ ಕೆಲವು ಬುದ್ಧಿಜೀವಿಗಳು ದಾಳಿಯ ಸಾಕ್ಷ್ಯ ಕೇಳುತ್ತಿದ್ದಾರೆ.
ಜಗತ್ತಿನ ಯಾವ ರಾಷ್ಟ್ರವೂ ಪಾಕಿಸ್ತಾನವನ್ನು ಬೆಂಬಲಿಸುತ್ತಿಲ್ಲ. ಮಹಾಘಟಬಂಧನದ ಮುಖಂಡರು ಮತ್ತು ಬುದ್ಧಿಜೀವಿಗಳೇ ಪಾಕಿಸ್ತಾನಕ್ಕೆ ಆಸರೆಯಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ 76 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ಈವರೆಗೆ 16 ಲಕ್ಷ ಜನರಿಂದ ಮಾತ್ರ ಅರ್ಜಿ ಸ್ವೀಕರಿಸಲಾಗಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಪರಿಸ್ಥಿತಿ ಸುಧಾರಿಸದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.