ಶಿವರಾತ್ರಿಗೆ ಬೀದಿ ಶೃಂಗರಿಸಿ ಸ್ವೀಟ್ ಹಂಚಿ ಸಂಭ್ರಮಿಸಿದ ಮುಸ್ಲೀಂ ಸಹೋದರರು

ಮಂಗಳೂರು, ಮಾರ್ಚ್ 04 : ಹಿಂದೂ ಮುಸ್ಲಿಮರ ನಡುವೆ ದ್ವೇಷದ ಬೀಜ ಬಿತ್ತಿ ಎರಡು ಕೋಮುಗಳ ನಡುವೆ ಕಂದಕ ನಿರ್ಮಿಸುತ್ತಿರುವವರು ಈ ಚುನಾವಣೆಯ ಪರ್ವ ಕಾಲದಲ್ಲಿರುವಾಗ ಮಂಗಳೂರು ನಗರದ ಕಂದುಕದ ಮುಸ್ಲೀಂ ಭಾಂಧವರು ಇವು ಎಲ್ಲವನ್ನೂ ಮೀರಿ ಮಾದರಿಯಾಗಿದ್ದಾರೆ.

ಹೌದು ಕಂದುಕದ ಮುಸ್ಲೀಂ ಭಾಂದವರು ಈ ಬಾರಿಯ ಶಿವರಾತ್ರಿ ಉತ್ಸವನ್ನು ಸೌಹಾರ್ದತೆಯ ಉತ್ಸವವನ್ನಾಗಿ ಮಾರ್ಪಡಿಸಿದ್ದಾರೆ.

ಶಿವರಾತ್ರಿಯ ಮೆರವಣಿಗೆಯ ಇಂದಿನ ಈ ರಾತ್ರಿಯಲ್ಲಿ ಮೆರವಣಿಗೆ ನಡೆಯುವ ಬೀದಿಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದಾರೆ.

ಮಾತ್ರವಲ್ಲ ಬಂದು ಹೋಗುವ ಎಲ್ಲ ಅತಿಥಿಗಳನ್ನು ತಂಪು ಪಾನಿಯ ನೀಡಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ.

ಕಂದುಕದ ಮುಸ್ಲೀಂ ಸಹೋದರರ ಈ ನಡೆ ಎಲ್ಲರಿಗೂ ಮಾದರಿಯಾಗಿದ್ದು, ಸೌಹಾರ್ದತೆಯನ್ನು ಬಿಂಬಿಸುವ ಸಂಕೇತವಾಗಿ ಬೆಳಗಿದ್ದಾರೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕಿನ ಸಮೀಪದ ಕಂದುಕದಲ್ಲಿ ನಿತ್ಯಾನಂದ ಆಶ್ರಮ ಒಂದಿದ್ದು,ಮಹಾಶಿವರಾತ್ರಿ ಪ್ರಯುಕ್ತ ಶೋಭಾಯಾತ್ರೆ ನಡೆಸುತ್ತಿದ್ದಾರೆ.

ಆದರೆ ಬಾರಿ ಸ್ವಲ್ಪ ಶೋಭಾ ಯಾತ್ರೆ ವಿಭಿನ್ನವಾಗಿದೆ. ಹಿಂದೂ ಸಹೋದರರು ನಡೆಸುವ ಇಲ್ಲಿ ಶೋಭಾಯಾತ್ರೆಗೆ ಕಂದಕ್ ಪ್ರದೇಶದ ಮುಸ್ಲಿಂ ಜಮಾಅತ್‌ನಿಂದ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿದ್ದು, ಸಿಹಿ ತಿನಿಸು-ತಂಪುಪಾನೀಯ ವಿತರಿಸಿ ಸೌಹಾರ್ದ ಮೆರೆದಿದ್ದಾರೆ.

ಈ ಬಗ್ಗೆ ಪ್ರತಕ್ರೀಯಿಸಿರುವ ಸ್ತಳೀಯ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ‘ಕಂದುಕ ಪರಿಸರ ಸೌಹಾರ್ದತೆ ಮತ್ತು ಸೋದರತೆಯ ಭಾವನೆಯಿಂದ ಆನೇಕ ದಶಕಗಳಿಂದ ಬದುಕುತ್ತಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಉತ್ತಮ ಬಾಂಧವ್ಯವಿದೆ. ಎಲ್ಲ ಸಮುದಾಯಗಳ ಜನತೆಯೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಈ ಕಂದುಕದ ಪರಿಸರದಂತೆ ಉಳಿದ ಪ್ರದೇಶಗಳೂ ಇದೇ ಮನೋಭಾವನೆಯೊಂದಿಗೆ ಮತ್ತು ಸೋದರತೆಯಿಂದ ಬಾಳಿ ಮಂಗಳೂರನ್ನು ಇತಿಹಾಸದ ಪುಟಗಳಲ್ಲಿ ಸೌಹಾರ್ದತೆಯ ನಗರವಾಗಿ ದಾಖಲಾಗುಂತೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾಗೋಣ ಎಂದು ಮನವಿ ಮಾಡಿದರು.

Facebook Comments

comments