LATEST NEWS
ನಿಜವಾದ ಮುಳ್ಳುಗಡ್ಡೆ ಕೊರಗಜ್ಜನ ಅಭಯ – ವಿವೇಕಾನಂದನ ಕರೆದುಕೊಂಡ ಬಂದ ನಾಯಿಯ ಅದ್ದೂರಿ ಮೆರವಣಿಗೆ ಮಾಡಿದ ಗ್ರಾಮಸ್ಥರು
ಕುಂದಾಪುರ ಸೆಪ್ಟೆಂಬರ್ 27 : ಕರಾವಳಿಯ ಜಿಲ್ಲೆಗಳಲ್ಲಿ ದೈವಕ್ಕೆ ಹೆಚ್ಚು ಮಹತ್ವ, ಯಾರೂ ಕೈ ಬಿಟ್ಟರೂ ನಂಬಿದ ದೈವ ಮಾತ್ರ ಜೊತೆಗೆ ಇರುತ್ತಾನೆ ಎಂಬ ನಂಬಿಕೆ ಜನರಲ್ಲಿ ಇದೆ, ಅದೇ ರೀತಿ ದೈವದ ಪವಾಡವೊಂದು ಇತ್ತೀಚೆಗೆ ನಡೆದಿದ್ದು, ಕೊರಗಜ್ಜನ ಅಭಯ ತಂದೆ ನಾಪತ್ತೆಯಾಗಿದ್ದ ಯುವಕ ಎಂಟು ದಿನಗಳ ಬಳಿಕ ಸಾಕುನಾಯಿ ಜತೆ ಪ್ರತ್ಯಕ್ಷನಾಗುತ್ತಾನೆ. ಮನೆಯವರು ನಂಬಿದ ದೈವವೇ ಯುವಕನನ್ನು ಮರಳಿ ಮನೆಗೆ ಕರೆಸಿದೆ ಎನ್ನುವುದು ಗ್ರಾಮಸ್ಥರ ನಂಬಿಕೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ ಎಂಬ ಯುವಕ ವಾರದ ಹಿಂದೆ ಕಣ್ಮರೆಯಾಗಿದ್ದರು. ಊರು, ಕಾಡಿನ ಸುತ್ತಮುತ್ತ ಇಡೀ ಗ್ರಾಮಕ್ಕೆ ಗ್ರಾಮ ಆತನನ್ನು ಹುಡುಕಾಟ ಮಾಡಿತ್ತು. ಆದರೆ ಮನೆಯವರು ದೈವದ ಮೊರೆ ಹೋದಾಗ ಆತ ಜೀವಂತ ಇದ್ದಾನೆ ಎಂಬ ಉತ್ತರ ಸಿಕ್ಕಿದೆ. ದೈವ ನೀಡಿದ ಭರವಸೆಯಿಂದ ಪೊಲೀಸರು, ಎಎನ್‌ಎಫ್ ಪಡೆಯೊಂದಿಗೆ ಗ್ರಾಮಸ್ಥರು ಹಗಲು ರಾತ್ರಿಯೆನ್ನದೆ ಅರಣ್ಯ ಪ್ರದೇಶ ಶೋಧಿಸಿದ್ದಾರೆ. ಆದರೆ ಎಲ್ಲಿಯೂ ಸುಳಿವು ಇಲ್ಲ. ಡ್ರೋನ್ ಬಳಸಿದರೂ ಪ್ರಯೋಜನ ಸಿಕ್ಕಿಲ್ಲ. ಈ ನಡುವೆ ಮನೆಯವರು ಹುಡುಕಾಡಿ ಸಿಗದ ಬಳಿಕ ಮುಳ್ಳುಗುಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾಥ೯ನೆ ಸಲ್ಲಿಸಿದರು. ಹಂದಿಯೊಂದನ್ನು ಓಡಿಸಿಕೊಂಡು ಹೋಗಿ ದಾರಿ ತಪ್ಪಿದ್ದಾನೆ.ಹಕ್ಕಿಯೊಂದು ದಾರಿ ತೋರಿಸಿದೆ.ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾನೆ.5 ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಆಗಲಿಲ್ಲವಾದರೆ ಇನ್ನು ಎರಡು ದಿನದ ಒಳಗೆ ಆತ ಮನೆಗೆ ಬರುತ್ತಾನೆ ಎಂದು ಕ್ಷೇತ್ರದ ಧಮ೯ದಶಿ೯ ಪುನೀತ್ ಅವರು ಹೇಳಿದ್ದರು.
ಆದರೆ ಎಂಟು ದಿನಗಳ ಬಳಿಕ ಆತನನ್ನು ಕರೆದುಕೊಂಡು ಬರುವುದು ಒಂದು ನಾಯಿ. ಎಲ್ಲಿ ಹೋಗಿದ್ದೆ ಅನ್ನುವುದು ಅವನಿಗೆ ಗೊತ್ತಿಲ್ಲ. ಕೇವಲ ನೀರು ಕುಡಿದು 8 ದಿನ ಕಳೆದಿದ್ದ ವಿವೇಕಾನಂದ ನಿತ್ರಾಣಗೊಂಡಿದ್ದರು. ಮಗ ಮರಳಿ ಮನೆ ಸೇರಿದ ಸಂತಸ ಹೆತ್ತವರಲ್ಲಿ ಕಾಣಿಸಿದರೆ, ದೈವರ ಬಗೆಗಿನ ನಂಬಿಕೆ ಮತ್ತಷ್ಟು ಹೆಚ್ಚಳಗೊಂಡಿದೆ. ವಿವೇಕಾನಂದ ಬದುಕಿದ್ದಾನೆ ಎಂದು ದೃಢವಾಣಿ ಸಿಕ್ಕಿದ್ದು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ ದೈವದಿಂದ. ಮನೆಯವರು ಕೊರಗಜ್ಜನಿಗೆ ವಿಶೇಷ ಸೇವೆ ನೀಡಲು ತೀರ್ಮಾನಿಸಿದ್ದಾರೆ. ಇನ್ನೊಂದೆಡೆ ಈತನ ಜೀವ ಉಳಿಸಿದ ಸಾಕು ನಾಯಿ ಅಚ್ಚರಿ ಮೂಡಿಸಿದೆ. ನಾಯಿ ವಿಶ್ವಾಸಾರ್ಹ ಜೀವಿ ಅನ್ನುವುದು ಈ ಘಟನೆಯ ಮೂಲಕ ಸಾಬೀತಾಗಿದೆ. ಇದರಿಂದ ಇಡೀ ಗ್ರಾಮಕ್ಕೆ ಅಚ್ಚರಿ ಮತ್ತು ಸಂತಸವಾಗಿದ್ದು, 50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಮೆರವಣಿಗೆ ಮಾಡಲಾಯ್ತು.
ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ. ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಲಾಯ್ತು. ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ.