MANGALORE
ಕರ್ ನಾಟಕ್ ಸ್ಪರ್ಧೆಗೆ ಭವ್ಯ ತೆರೆ – ಕೊಂಕಣಿ ನಾಟಕ ಸ್ಪರ್ಧೆಯಲ್ಲಿ ನಾನ್ ಲೈಂಗಿಕ ತೊಳಿಲಾಲಿ ಪ್ರಥಮ
ಮಂಗಳೂರು ಸೆಪ್ಟೆಂಬರ್ 27: ಕೊಂಕಣಿಯ ಪ್ರಸಿದ್ದ ಕಲಾ ತಂಡ ಕೊಮಿಡಿ ಕಂಪೆನಿಯು ತಮ್ಮ ತಂಡದ ಸದಸ್ಯ ದಿ. ಸುನಿಲ್ ಕ್ರಾಸ್ತಾ ಸ್ಮರಣಾರ್ಥ ಆಯೋಜಿಸಿದ `ಕರ್ ನಾಟಕ್’ ಆಹ್ವಾನಿತ ತಂಡಗಳ ನಾಟಕ ಸ್ಪರ್ಧೆಯ ಸಮಾರೋಪ 24-09-2023 ರಂದು ನಗರದ ಸಂತ ಎಲೋಶಿಯಸ್ ಕಾಲೇಜಿನ LCRI ಸಭಾಂಗಣದಲ್ಲಿ ನೆರವೇರಿತು.
ಲೋಗೋಸ್ ಥಿಯೇಟರ್ ತಂಡದ ‘ನಾನ್ ಲೈಂಗಿಕ ತೊಳಿಲಾಲಿ’ ನಾಟಕವು ರು. 40,000/- ಬಹುಮಾನ ಮೊತ್ತದೊಡನೆ ಪ್ರಥಮ ಸ್ಥಾನ ಪಡೆಯಿತು. ‘ರಂಗ್ ಥಿಕಾಂ’ ತಂಡದ ‘ಸೊರ಼್ಯಾ ವ್ಯಾಪಾರಿಚೊ ದುಡು’ ನಾಟಕಕ್ಕೆ ರು. 30,000/- ದ್ವಿತೀಯ ಸ್ಥಾನ ಮತ್ತು ‘ಉತ್ಸಾಹಿ ಕಲಾಕಾರ್ ಗಂಟಾಲ್ಕಟ್ಟೆ’ ತಂಡದ ‘ಮ್ಹಜ್ಯಾ ಪುತಾಚೊ ಕಿಣ್ಕುಳೊ’ ನಾಟಕವು ತೃತೀಯ ಸ್ಥಾನಿಯಾಗಿ ರು. 20,000/- ಬಹುಮಾನ ಪಡೆಯಿತು.
ಉತ್ತಮ ನಟ – ಪ್ರಕಾಶ್ ಕೆ, ಉತ್ತಮ ನಟಿ – ಸ್ವೀಡಲ್ ಡಿಸೋಜ, ಪೋಷಕ ಪಾತ್ರ – ಡೊನ್ನಾ ಡಿಸೋಜ, ಸಂಗೀತ – ಕ್ಲಾನ್ವಿನ್ ಫೆರ್ನಾಂಡಿಸ್, ನಿರ್ದೇಶಕ – ಕ್ರಿಸ್ಟೋಫರ್ ಡಿಸೋಜ, ಕತೆ – ಚಾಫ್ರಾ ಡಿಕೋಸ್ತಾ ತೀರ್ಪುದಾರರ ಮೆಚ್ಚುಗೆಯ ಪಾತ್ರ – ಕಿಯಾರಾ ಪಿರೇರಾ, ಸ್ತ್ರೀ ಲೇಖಕಿ – ಪ್ರೀತಿ ಮಾರ್ತಾ ಡಿಸೋಜ ಇವರನ್ನೂ ಗೌರವಿಸಲಾಯಿತು.
ಸುನಿಲ್ ಕ್ರಾಸ್ತಾ ಇವರ ಪತ್ನಿ ಲಿನೆಟ್ ಕ್ರಾಸ್ತಾ ಹಾಗೂ ಮಕ್ಕಳಾದ ಸಿಯಾನ್ ಮತ್ತು ಡ್ಯಾರನ್ ಇವರು ಟ್ರೋಫಿ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ವಂ ಪ್ರವೀಣ್ ಮಾರ್ಟಿಸ್ ಮತ್ತು ತುಳು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಗೌರವ ಅತಿಥಿಗಳಾದ ವಾಲ್ಟರ್ ನಂದಳಿಕೆ, ಸಂತೋಷ್ ಸಿಕ್ವೇರಾ, CA ಓಲ್ವಿನ್ ರೊಡ್ರಿಗಸ್ ಹಾಗೂ ಸ್ಪರ್ಧೆಯ ನಿರ್ಣಾಯಕರಾದ ವಂ ಫ್ರಾನ್ಸಿಸ್ ರೊಡ್ರಿಗಸ್, ಜೊಯೆಲ್ ಪಿರೇರಾ, ಡೆನಿಸ್ ಪಿರೇರಾ ಹಾಗೂ ಕೊಂಕಣಿ ಚಲನಚಿತ್ರ ಅಸ್ಮಿತಾಯ್ ಇದರ ನಾಯಕ ನಟ ಅಶ್ವಿನ್ ಡಿಕೋಸ್ತಾ, ನಾಯಕಿ ವೆನ್ಸಿಟಾ ಡಾಯಸ್ ಉಪಸ್ಥಿತರಿದ್ದು ಶುಭ ಕೋರಿದರು.
ಈ ಸ್ಪರ್ಧೆಯು ಮೇ 27 ಮತ್ತು 28 ರಂದು ನಡೆದಿದ್ದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ 11 ಆಹ್ವಾನಿತ ತಂಡಗಳು ಬಿರುಸಿನ ಸ್ಪರ್ಧೆ ನೀಡಿದ್ದವು. ಇದೇ ವೇಳೆ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದ್ದ 10 ಜನ ಹಿರಿಯ ಕಲಾವಿದರನ್ನು ಗೌರವಿಸಲಾಗಿತ್ತು.