Connect with us

LATEST NEWS

ಗಂಡ ಹೆಂಡತಿ ಜಗಳ – ಕದ್ರಿ ಪೊಲೀಸರ ಎದುರೇ ಮಕ್ಕಳನ್ನು ಕೊಲೆಗೆ ಯತ್ನಿಸಿದ ಅಪ್ಪ…!!

ಮಂಗಳೂರು ಸೆಪ್ಟೆಂಬರ್ 27: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರೇ ಇಬ್ಬರು ಮಕ್ಕಳ ಕೊಲೆಗೆ ಯತ್ನಿಸಿದ ಘಟನೆ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.


ವ್ಯಾಸನಗರ ವಿಶ್ವಾಸ್‌ ಅನ್ಮೋಲ್‌ ಅಪಾಟ್‌ರ್ಮೆಂಟ್‌ ನಿವಾಸಿ ಮಹೇಶ್‌ ಕೃತ್ಯವೆಸಗಿದ ಆರೋಪಿ ಎಂದು ಗುರುತಿಸಲಾಗಿದೆ. ಈತ ದಿನ ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಸೆಪ್ಟೆಂಬರ್ 24ರಂದು ರಾತ್ರಿ ಮತ್ತೆ ಕುಡಿದು ಬಂದು ಪತ್ನಿ ಜತೆ ಜಗಳ ಮಾಡಿ ಪತ್ನಿ ಮತ್ತು ಮಕ್ಕಳನ್ನು ಬೆಂಕಿ ಹಚ್ಚಿ ಕೊಲ್ಲುತ್ತೇನೆ ಎಂದು ಬೆದರಿಸಿ, ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಪತ್ನಿ ತಪ್ಪಿಸಿಕೊಂಡು ಹತ್ತಿರದಲ್ಲಿರುವ ಕದ್ರಿ ಠಾಣೆಗೆ ಬಂದು ರಕ್ಷಣೆಗೆ ಮನವಿ ಮಾಡಿದ್ದಾರೆ. ಈ ವೇಳೆ ಆರೋಪಿ ಮಹೇಶ ಕೂಡ ತನ್ನ 6 ವರ್ಷದ ಗಂಡು ಮಗು ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ವಿಚಾರಿಸಿದಾಗ ಆರೋಪಿ ಮಕ್ಕಳನ್ನು ಪೊಲೀಸ್ ಠಾಣೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದು, ಮತ್ತೆ ಪತ್ನಿಯ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ತನ್ನ ಕೈಯಲ್ಲಿದ್ದ ಮಗಳನ್ನು ಗೋಡೆಗೆ ಬಿಸಾಡಿ ಕೊಲ್ಲುತ್ತೇನೆಂದು ಹೇಳಿದ್ದಾನೆ. ಪೊಲೀಸರು ಮಗುವನ್ನು ಬಿಡುವಂತೆ ಹೇಳಿದಾಗ, ಮಗುವಿನ ಕುತ್ತಿಗೆಯನ್ನು ತಿರುಗಿಸಿ ಕೈ ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ್ದಾನೆ.


ಇದರಿಂದ ಮಗುವಿನ ಕುತ್ತಿಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕೂಗಲಾರಂಭಿಸಿದೆ. ಈ ಸಮಯಕ್ಕೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಠಾಣಾ ಪಿಎಸ್‌ಐ ಪ್ರತಿಭಾ ಕೂಡಲೇ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಹಾಗೂ ಬಾಲಕನನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಯ ಪ್ರಭಾರ ಕರ್ತವ್ಯದಲ್ಲಿದ್ದ ಹೆಡ್‌ ಕಾನ್‌ಸ್ಟೇಬಲ್‌ ಶರತ್‌ ಕುಮಾರ್‌ ಅವರು ಮಗುವಿನ ಜೀವರಕ್ಷಣೆ ಬಗ್ಗೆ ಪ್ರಯತ್ನಿಸಿದಾಗ ಆರೋಪಿಯು ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share Information
Advertisement
Click to comment

You must be logged in to post a comment Login

Leave a Reply