DAKSHINA KANNADA
ಕೊಂಬೆಟ್ಟು – ವಿಧ್ಯಾರ್ಥಿಯ ಮೇಲೆ ಸುಳ್ಳು ದೂರು ದಾಖಲಿಸಿರುವ ವಿಧ್ಯಾರ್ಥಿನಿ ವಜಾಕ್ಕೆ ಆಗ್ರಹ
ಪುತ್ತೂರು ಅಗಸ್ಟ್ 23: ಬ್ಲೇಡ್ ನಿಂದ ಕೈಗೆ ಇರಿಯಲಾಗಿದೆ ಎಂದು ವಿಧ್ಯಾರ್ಥಿಯೊಬ್ಬನ ಮೇಲೆ ಸುಳ್ಳು ಆರೋಪ ಹೊರಿಸಿ ಆತನ ಮಾನಹಾನಿ ಮಾಡಿರುವ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ವಜಾಗೊಳಿಸಬೇಕು’ ಎಂದು ಕಾಲೇಜಿನ ವಿದ್ಯಾರ್ಥಿ ಸಂಘಟನೆಯವರು ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ.ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸುಳ್ಳು ದೂರು ದಾಖಲಾಗಿರುವ ಸಂತ್ರಸ್ತ ವಿದ್ಯಾರ್ಥಿಯ ಪೊಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸುಳ್ಳು ದೂರು ನೀಡಿರುವ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ವಜಾಗೊಳಿಸದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣವನ್ನು ಖಂಡಿಸಿ ಪುತ್ತೂರಿನ ಕಾಲೇಜು ವಿದ್ಯಾರ್ಥಿಗಳು ಪುತ್ತೂರು ನಗರದ ಸಭಾಭವನವೊಂದರಲ್ಲಿ ಗುರುವಾರ ಸಭೆ ನಡೆಸಿದರು.
You must be logged in to post a comment Login