Connect with us

    LATEST NEWS

    ಬೈಂದೂರಿನಲ್ಲಿ ಹಾಡಹಗಲೇ ಆಕಸ್ಮಿಕ ಬೆಂಕಿಗೆ ಫ್ಯಾನ್ಸಿ ಸ್ಟೋರ್ ಭಸ್ಮ, ಲಕ್ಷಾಂತರ ರೂಪಾಯಿಗಳ ನಷ್ಟ..!

    ಉಡುಪಿ : ಅಕಸ್ಮಿಕವಾಗಿ  ಬಿದ್ದ ಬೆಂಕಿಗೆ ಫ್ಯಾನ್ಸಿ  ಅಂಗಡಿಯೇ ಸುಟ್ಟು ಭಸ್ಮವಾದ ಘಟನೆ ಉಡುಪಿ ಜಿಲ್ಲೆ ಬೈಂದೂರಿನಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ.
    ಇಲ್ಲಿನ  ನಾವುಂದ ಜಂಕ್ಷನ್ ಪ್ಲಾಜಾ ಗ್ರೋ ಕಾಂಪ್ಲೆಕ್ಸ್ ನಲ್ಲಿರುವ ಪ್ರತೀಮಾ ಆಚಾರ್ಯರಿಗೆ ಈ  ಫ್ಯಾನ್ಸಿ ಸ್ಟೋರ್  ಸಂಬಂಧಿಸಿದಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ  ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿವೆ. ಶ್ರೀಮತಿ ಪ್ರತಿಭಾ ವಿಜೇಂದ್ರ ಅರೆಹೊಳೆ ಎಂಬವರು ಟೈಲರಿಂಗ್ ಜೊತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿಯೊಂದಿಗೆ ಅಂಗಡಿ ನಡೆಸಿಕೊಂಡಿದ್ದರು. ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ಐಟಂಗಳ ಜೊತೆಗೆ ಸುಮಾರು 5000 ರೂಪಾಯಿ ನಗದು  ಇತ್ತು ಎನ್ನಲಾಗಿದ್ದು ಎಲ್ಲವೂ ಬೆಂಕಿಗಾಹುತಿಯಾಗಿದೆ.
    ಅಂಗಡಿ ಮಾಲಕಿ ಪ್ರತಿಭಾ ವಿಜೇಂದ್ರ ಅವರು ಮಧ್ಯಾಹ್ನ 12.00ರವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ನಂತರ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು 12.45ರ ಹೊತ್ತಿಗೆ ಹೊಗೆ ತುಂಬಿಕೊಂಡದ್ದನ್ನು ಆಸುಪಾಸಿನ ಅಂಗಡಿಯವರು ಹಾಗೂ ಸ್ಥಳಿಯರು ನೋಡಿ ಅಗ್ನಿಶಾಮಕ ಹಾಗೂ ಪೋಲೀಸರಿಗೆ ಫೋನ್ ಮಾಡಿದ್ದರು.
    ಅಗ್ನಿ ಶಾಮಕದವರು ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು 3 ಲಕ್ಷಕ್ಕೂ ಮಿಕ್ಕಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.  ಸ್ಥಳಕ್ಕೆ ಬೈಂದೂರು ಪೋಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.
    https://youtu.be/6R1C6a7Vb1A
    Share Information
    Advertisement
    Click to comment

    You must be logged in to post a comment Login

    Leave a Reply