Connect with us

LATEST NEWS

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಮಲೆಯಾಳಂ ಸೂಪರಸ್ಟಾರ್ ಮೋಹನ್ ಲಾಲ್

ಉಡುಪಿ ಎಪ್ರಿಲ್ 18: ಮಲೆಯಾಳಂ ನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಶೂಟಿಂಗ್‌ ಗೆ ಬ್ರೇಕ್ ಹಾಕಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದು ಮೋಹನ್‌ ಲಾಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.


ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್‌ ಲಾಲ್ ಭೇಟಿ ನೀಡಿದ್ರು. ಮುಂಜಾನೆ ಮಹಾಮಂಗಳಾರತಿಯಲ್ಲಿ ಮೋಹನ್‌ ಲಾಲ್ ಪಾಲ್ಗೊಂಡಿದ್ದರು. ದೇಗುಲದಲ್ಲಿ ಕೆಲ ಕಾಲ ಧ್ಯಾನ ಮಾಡಿದ್ರು. ಈ ವೇಳೆ ಅಭಿಮಾನಿಗಳು ಮೋಹನ್‌ ಲಾಲ್ ಜೊತೆಗೆ ಸೆಲ್ಫಿ ತೆಗೆಯಿಸಿಕೊಳ್ಳಲು ಹಾಗೂ ವಿಡಿಯೋ ಮಾಡಲು ಮುಗಿಬಿದ್ದಿದ್ದರು. ಕೇರಳದಿಂದ ಅಷ್ಟೇ ಅಲ್ಲದೇ ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಿಂದಲೂ ಅನೇಕ ಸೆಲೆಬ್ರೆಟಿಗಳು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *