Connect with us

LATEST NEWS

ಮಸೀದಿಯೊಳಗೆ ನುಗ್ಗಿ ಗುಂಪಾಗಿ ನಮಾಜ್ ಮಾಡುತ್ತಿದ್ದವರ ವಶಕ್ಕೆ ಪಡೆದ ಮಹಿಳಾ ತಹಶೀಲ್ದಾರ್

ಮಸೀದಿಯೊಳಗೆ ನುಗ್ಗಿ ಗುಂಪಾಗಿ ನಮಾಜ್ ಮಾಡುತ್ತಿದ್ದವರ ವಶಕ್ಕೆ ಪಡೆದ ಮಹಿಳಾ ತಹಶೀಲ್ದಾರ್

ಕೋಲಾರ ಮೆ.1: ಕೊರೊನಾ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ಯಾರೂ ಗುಂಪಾಗಿ ಸೇರಬಾರದೆಂದು ರಾಜ್ಯ ಸರಕಾರ ಎಷ್ಟೇ ಮನವಿ ಮಾಡಿಕೊಂಡರು ಕೆಲವು ಮಾತ್ರ ಅದಕ್ಕೆ ಸೊಪ್ಪು ಹಾಕುತ್ತಾ ಇಲ್ಲ. ಅಂತವರ ವಿರುದ್ದ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳುತ್ತಿದ್ದು, ಅಂತಹದೇ ಪ್ರಕರಣ ಕೊಲಾರದಲ್ಲಿ ನಡೆದಿದ್ದು, ಮಸೀದಿಯೊಳಗೆ ಕಾಲಿಟ್ಟ ಕೋಲಾರ ತಹಶೀಲ್ದಾರ್ ಶೋಭಿತ ಅವರು ನಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ದಿಟ್ಟತನ ಮೆರೆದಿದ್ದಾರೆ.

ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಜನರು ಸಾಮೂಹಿಕವಾಗಿ ಎಲ್ಲೂ ಭಾಗವಹಿಸಬಾರದು ಮತ್ತು ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಎಲ್ಲೂ ಸಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂದು ನಿರ್ಬಂಧ ಮಾಡಲಾಗಿದೆ. ಆದರೂ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರಿಗೆ ತಹಶೀಲ್ದಾರ್ ಶೋಭಿತ ಅವರು ಒಳ್ಳೆಯ ಪಾಠ ಕಲಿಸಿದ್ದಾರೆ.

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ತೆರಳಿದ ತಹಶೀಲ್ದಾರ್ ಶೋಭಿತ, ಲಾಕ್‍ಡೌನ್ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 11 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು, ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು, ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದಾರೆ.

ವಿಡಿಯೋ

Facebook Comments

comments