KARNATAKA
ಜಿಲ್ಲಾಸ್ಪತ್ರೆಯಿಂದ ಅಪಹರಣಕ್ಕೀಡಾದ ನವಜಾತ ಶಿಶು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ ಕೋಲಾರ ಪೊಲೀಸರು..!

ಕೋಲಾರ: ಕೋಲಾರ ಜಿಲ್ಲಾಸ್ಪತ್ರೆಯಿಂದ ಅಪಹರಣಕ್ಕೀಡಾದ ನವಜಾತ ಶಿಶುವನ್ನು ಪತ್ತೆಹಚ್ಚಿ ಮರಳಿ ಪೋಷಕರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಅಪಹರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಸ್ವಾತಿ ಬಂಧಿತ ಆರೋಪಿ ಮಹಿಳೆಯಾಗಿದ್ದು ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ ಹಾಗೂ ಪೂವರಸನ್ ಎಂಬ ದಂಪತಿಗೆ ಸೇರಿದ ಆರು ದಿನಗಳ ಶಿಶುವನ್ನು ಗುರುವಾರ 4 ಗಂಟೆ ಸುಮಾರಿಗೆ ಮೂವರು ಮಹಿಳೆಯರು ಕೋಲಾರ ಆಸ್ಪತ್ರೆಯಿಂದ ಅಪಹರಿಸಿದ್ದರು. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ =ಕಾರ್ಯಾಚರಣೆಗೆ ಇಳಿದ ಪೊಲೀಸರು ಕೋಲಾರ ಗಡಿ, ತಮಿಳುನಾಡಿನ ಬೇರಿಕೆ ಎಂಬಲ್ಲಿ ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.
