Connect with us

    KARNATAKA

    ಕೋಲಾರ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಫರ್ನಿಚರ್ ಸೇಲ್

    ಕೋಲಾರ ಸೆಪ್ಟೆಂಬರ್ 22: ಆನ್ ಲೈನ್ ವಂಚಕರು ಯಾರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಜನಸಾಮಾನ್ಯರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣ ಲಪಟಾಯಿಸುತ್ತಿದ್ದ ಖದೀಮರು ಇದೀಗ ಕೋಲಾರ ಜಿಲ್ಲಾಧಿಕಾರಿ ಹೆಸರನ್ನೇ ಬಳಸಿಕೊಂಡಿದ್ದಾರೆ.

    ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಹೆಸರಿನಲ್ಲಿ‌ ನಕಲಿ ಖಾತೆ ತೆರೆದಿದ್ದು,ಹಾಸನ‌ ಜಿಲ್ಲಾಧಿಕಾರಿ ಎಂದು ಖಾತೆ ಸೃಷ್ಟಿಸಿ ಪೀಠೋಪಕರಣ ಮಾರಾಟ ಮಾಡಲು ಯತ್ನಿಸಿದ್ದಾರೆ.

    ಹಾಸನ‌ ಜಿಲ್ಲಾಧಿಕಾರಿ ಕಚೇರಿ ಮತ್ತು ಅಕ್ರಂ ಪಾಷ ಪೋಟೋವನ್ನು ದುರ್ಬಳಕೆ ಮಾಡಿಕೊಂಡಿರುವ ವಂಚಕರು, ನನ್ನ ಸ್ನೇಹಿತ ಉತ್ತಮ ಪೀಠೋಪಕರಣಗಳನ್ನು ಮಾರಾಟ ಮಾಡುತಿದ್ದಾರೆ ಎನ್ನುವ ಮೂಲಕ ವಂಚನೆಗೆ ಪ್ರಯತ್ನಿಸಿದ್ದಾರೆ.   ಈ ಬಗ್ಗೆ ಸೈಬರ್ ಪೋಲೀಸರಿಗೆ ಕೋಲಾರ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply