Connect with us

DAKSHINA KANNADA

ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದಕ್ಷಿಣ ಕನ್ನಡ ಪುಟಾಣಿಗಳ ತಂಡಕ್ಕೆ ಕೊಡಗು ಜಿಲ್ಲಾಧಿಕಾರಿ ಅವಮಾನ..!!?

ಮಂಗಳೂರು :  ಯಾವುದೇ ಫಲಾಪೇಕ್ಷೆ ಇಲ್ಲದೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪುಟಾಣಿಗಳ ತಂಡವೊಂದಕ್ಕೆ ಕೊಡಗು ಜಿಲ್ಲಾಧಿಕಾರಿ ಅವಮಾನ ಮಾಡಿ ಕಳುಹಿಸಿದ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಶಾಲೆಯ ಐವರು ಮಕ್ಕಳು ಮತದಾನ ಜಾಗೃತಿಗಾಗಿ ಕೊಡಗು ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಜಾಗೃತಿಯ ಹಾಡಿನ ಮೂಲಕ ಕೊಡಗಿನ ಜಮಸಂದಣಿ ಇರುವ ಪ್ರದೇಶಗಳಲ್ಲಿ ತನ್ನ ಮತದಾನ ಜಾಗೃತಿ ಹಾಡಿನ ಮೂಲಕ ಈ ಪುಟಾಣಿಗಳು ಜನರ ಮನಸ್ಸನ್ನೂ ಸೆಳೆದಿದ್ದರು. ಈ ತಂಡದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಮತದಾನ ಜಾಗೃತಿಗಾಗಿ ಪ್ರಶಂಶನಾ ಪತ್ರ ಪಡೆದಂತಹ ಪುಟಾಣಿ ಸನ್ನಿಧಿ ಕಶೆಕೋಡಿ ಕೂಡಾ ಇದ್ದರು.

ಈಗಾಗಲೇ ದಕ್ಷಿಣಕನ್ನಡ ಜಿಲ್ಲೆ, ಕೇರಳ ರಾಜ್ಯದಲ್ಲಿ ಮತದಾನ ಜಾಗೃತಿ ಮಾಡಿರುವ ಸನ್ನಿಧಿ ಕಶೆಕೋಡಿ ತನ್ನ ಜಾಗೃತಿ ಕಾರ್ಯಕ್ರಮ ಮುಗಿದ ಬಳಿಕ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅವರೊಂದಿಗೆ ಒಂದು ಭಾವಚಿತ್ರವನ್ನು ತೆಗೆಯುತ್ತಿದ್ದರು. ಅದೇ ರೀತಿ ಕೊಡಗು ಜಿಲ್ಲಾಧಿಕಾರಿ ಜೊತೆಗೂ ಒಂದು ಗ್ರೂಪ್ ಫೋಟೋ ತೆಗೆಯಲು ಮನವಿ ಮಾಡಿದ ತಂಡಕ್ಕೆ ಜಿಲ್ಲಾಧಿಕಾರಿ ಅವಮನ ಮಾಡಿ ಕಳುಹಿಸಿದ್ದಾರೆ. ಮಕ್ಕಳನ್ನು ಚುನಾವಣೆಗೆ ಬಳಸಬಾರದು ಎನ್ನುವ ಸೂಚನೆಯನ್ನೂ ನೀಡಿ ಕಳುಹಿಸಿದ್ದಾರೆ.

ಮಕ್ಕಳನ್ನು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಬಳಸಬಾರದು ಎನ್ನುವ ನಿಯಮವಿದ್ದು, ಮಕ್ಕಳು ಮತದಾನದ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎನ್ನುವ ಹೊಸ ನಿಯಮವಿದೆ ಎನ್ನುವುದು ಕೊಡಗು ಜಿಲ್ಲಾಧಿಕಾರಿಯ ಮೂಲಕ ತಿಲಿದುಬಂದಿದೆ. ಹಾಗಿದ್ದ ಪಕ್ಷದಲ್ಲಿ ಮತದಾನ ಜಾಗೃತಿ ಮಾಡಿದ ಸನ್ನಿಧಿ ಕಶೆಕೋಡಿಗೆ ಪ್ರಶಂಸನಾ ಪತ್ರ ನೀಡಿದ ಚುನಾವಣಾ ಆಯೋಗದ ಮೇಲೂ ಕ್ರಮ ಜರುಗಿಸಬೇಕು ಎನ್ನುವ ಮಾತುಗಳೂ ಹರಿದಾಡಲಾರಂಭಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *