Connect with us

LATEST NEWS

ಕೊಚ್ಚಿ: ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ

ಕೊಚ್ಚಿ, ಮೇ 18: ನಟಿ, ರೂಪದರ್ಶಿ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯೂ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಚಕ್ಕರಪರಂಬು ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಶೆರಿನ್ ಮೃತಪಟ್ಟಿದ್ದಾರೆ.

26 ವರ್ಷ ವಯಸ್ಸಿನ ಶೆರಿನ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಮೊದಲಿಗೆ ನೋಡಿದ ಆಕೆಯ ರೂಂಮೇಟ್, ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆಳಪ್ಪುಳ ಜಿಲ್ಲೆ ಮೂಲದ ಶೆರಿನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದರು. ಪ್ರಾಥಮಿಕ ತನಿಖೆ ಬಳಿಕ ಮಾನಸಿಕ ಒತ್ತಡ ಎದುರಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚಕ್ಕರಪರಂಬು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ವರ್ಷ ರೇಡಿಯೋ ಜಾಕಿ, ರೂಪದರ್ಶಿ ಮಂಗಳಮುಖಿ ಅನನ್ಯ ಕುಮಾರಿ ಅಲೆಕ್ಸ್ ಕೂಡಾ ಕೊಚ್ಚಿಯ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಇದೇ ರೀತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೇ 12 ರಂದು, ಕೋಳಿಕ್ಕೋಡ್‌ನ ಯುವ ಮಾಡೆಲ್ ಮತ್ತು ನಟಿ ಸಹನಾ ತನ್ನ 21 ನೇ ಹುಟ್ಟುಹಬ್ಬದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬೆನ್ನಲ್ಲೇ ಶೆರಿನ ಸಾವಿನ ಸುದ್ದಿ ಬಂದಿದೆ. ಈ ಹಿಂದೆ ಅನನ್ಯ ಸಾವು ಕೇರಳವನ್ನು ಕಂಗೆಡಿಸಿತ್ತು. ಆಕೆಯ ಸಾವಿನ ಕುರಿತು ಸತ್ಯಶೋಧನೆಯ ವರದಿಯು ಖಾಸಗಿ ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತ್ತು ಮತ್ತು ರಾಜ್ಯದಲ್ಲಿ ಟ್ರಾನ್ಸ್ ವ್ಯಕ್ತಿಗಳಿಗೆ ಮತ್ತು ವೈದ್ಯಕೀಯ ವೃತ್ತಿಪರರು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲು ಉತ್ತಮ ಆರೋಗ್ಯವನ್ನು ಬಯಸಿದೆ. ಸತ್ಯಶೋಧನಾ ತಂಡವು ಅನನ್ಯ ಎರಡನೇ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದು, ಸಾವಿನ ಬಗ್ಗೆ ಪೊಲೀಸ್ ತನಿಖೆ ಕಳಪೆಯಾಗಿದೆ ಎಂದು ತಿಳಿಸಿತ್ತು

Share Information
Continue Reading
Advertisement
Click to comment

Leave a Reply

Your email address will not be published. Required fields are marked *