LATEST NEWS
ಬಾಂಗ್ಲಾದೇಶ – ಸಿನೆಮಾ ನಟ ಮತ್ತು ಆತನ ತಂದೆಯನ್ನು ರಸ್ತೆಯಲ್ಲಿ ಹೊಡೆದು ಕೊಂದ ಜನ
ಢಾಕಾ ಅಗಸ್ಟ್ 08: ಬಾಂಗ್ಲಾದೇಶದಲ್ಲಿ ಅರಾಜಕತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಇದೀಗ ಜನ ಸಿಕ್ಕ ಸಿಕ್ಕವರನ್ನೆಲ್ಲಾ ಕೊಲೆ ಮಾಡುವ ಹಂತಕ್ಕೆ ತಲುಪಿದ್ದು, ಈಗಾಗಲೇ 200ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಆಗಸ್ಟ್ 05 ರಂದು ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದು ಹಾಕಿದ್ದಾರೆ.
ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ನಟ ಶಾಂತೊ ಖಾನ್ ಹಾಗೂ ಅವರ ತಂದೆ, ನಿರ್ಮಾಪಕ ಸಲೀಮ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ. ಬಾಲಿಯಾ ಯೂನಿಯನ್ನಲ್ಲಿರುವ ಫರಕ್ಕಾಬಾದ್ ಬಜಾರ್ಗೆ ಸೆಲಿಮ್ ಮತ್ತು ಶಾಂಟೊ ತಮ್ಮ ಹಳ್ಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ತಿಳಿಸಿವೆ. ಸ್ಥಳೀಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ತಪ್ಪಿಸಿಕೊಳ್ಳಲು ಗುಂಡು ಹಾರಿಸಿದರು. ಆದರೆ, ಸಮೀಪದ ಬಗರಬಜಾರ್ ಪ್ರದೇಶವನ್ನು ತಲುಪಿದಾಗ, ಆಕ್ರೋಶಗೊಂಡ ಗುಂಪು ಅವರನ್ನು ಹಿಡಿದು ಕೊಂದಿತು ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳದ ಚಿತ್ರೋದ್ಯಮದ ಸದಸ್ಯರು ಈ ಹತ್ಯೆಯನ್ನು ಖಚಿತಪಡಿಸಿದ್ದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
You must be logged in to post a comment Login